ಜಾಲ್ಸೂರು ಗ್ರಾಮದ ಅಡ್ಕಾರು ದೇವಸ್ಥಾನದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ ಆ. 8ರಂದು ಸಂಜೆ ನಡೆಯಲಿದ್ದು, ಈ ಕುರಿತು ಪೂರ್ವಭಾವಿ ಸಭೆಯು ಜು. 19 ರಂದು ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು.
















ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಸಂಯೋಜಕರಾದ ನ. ಸೀತಾರಾಮ ಕಾರ್ಯಕ್ರಮದ ಆಯೋಜನೆ ಕುರಿತು ಮಾತನಾಡಿದರು. ಆಡಳಿತ ಮೊಕ್ತೇಸರ ಗುರುರಾಜ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ವರಮಹಾಲಕ್ಷ್ಮಿ ಪೂಜಾ ಸಮಿತಿ ರಚಿಸಿದ್ದು, ಗೌರವಾಧ್ಯಕ್ಷರಾಗಿ ಶ್ರೀಮತಿ ಶುಭಾ ಸುಧಾಕರ ಕಾಮತ್, ಅಧ್ಯಕ್ಷರಾಗಿ ಶ್ರೀಮತಿ ಸೌಮ್ಯ ಶ್ಯಾಂಪ್ರಸಾದ್ ಅಡ್ಡಂತ್ತಡ್ಕ, ಕಾರ್ಯದರ್ಶಿಯಾಗಿ ಶ್ರೀಮತಿ ವೀಣಾ ಹರಿಪ್ರಕಾಶ್ ಅಡ್ಕಾರು, ಖಜಾಂಜಿಯಾಗಿ ಶ್ರೀಮತಿ ಭವ್ಯ ರಜತ್‌ರವರನ್ನು ಆಯ್ಕೆ ಮಾಡಲಾಯಿತು. ರಜತ್ ಅಡ್ಕಾರು ಕಾರ್ಯಕ್ರಮ ನಿರೂಪಿಸಿದರು.










