














ದಾಸರಾಬೈಲು ಸ. ಕಿ. ಪ್ರಾ.ಶಾಲೆಯಲ್ಲಿ ಜು. 15ರಂದು ಶ್ರಮದಾನ ನಡೆಯಿತು. ಪೋಷಕರು ಮತ್ತು ಎಸ್ ಡಿಎಂಸಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಶಾಲೆಯ ಸುತ್ತಮುತ್ತ ಕಾಡು ಕಡಿದು ಶಾಲೆಯ ಆವರಣವನ್ನು ಸ್ವಚ್ಛ ಮಾಡಿದ್ದಾರೆ. ಮಾಜಿ ಎಸ್ ಡಿಎಂಸಿಯ ಅಧ್ಯಕ್ಷರು ಪದ್ಮನಾಭ ಇವರು ಶ್ರಮದಾನದಲ್ಲಿ ಭಾಗಿಯಾಗಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯರಾದ ಬೆಳ್ಳಪ್ಪ ಕೆ ಇವರು ಧನ್ಯವಾದ ಸಲ್ಲಿಸಿದರು.










