ಕೆ.ಡಿ.ಪಿ. ಸಭೆಯಲ್ಲಿ ಸುಜಯಕೃಷ್ಣರಿಂದ ಚರ್ಚೆ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯೆ ಶ್ರೀಮತಿ ಸುಜಯ ಕೃಷ್ಣರವರು ಮಾತನಾಡಿ
ಸುಳ್ಯ ತಾಲೂಕಿನಲ್ಲಿ ಆಶ್ರಯ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದ್ದು ಈವರೆಗೂ ಯಾವುದೇ ಸಭೆ ಕರೆದಿರುವುದಿಲ್ಲ. 500 ಮಂದಿ ಫಲಾನುಭವಿಗಳು ಆಯ್ಕೆಯಾಗಿದ್ದು ಆಶ್ರಯ ಸಮಿತಿ ಯೋಜನೆಯಡಿ 25 ಮನೆಗಳನ್ನು ನಿರ್ಮಾಣ ಮಾಡಲಾಗಿರುತ್ತದೆ. ದುಗಲಡ್ಕ ಎಂಬಲ್ಲಿ ಸ್ಥಳವನ್ನು ಗುರುತಿಸಲಾಗಿದ್ದು ಜಾಗವನ್ನು ಸಮತಟ್ಟು ಮಾಡಲು ಬಾಕಿಯಿದ್ದು ಈವರೆಗೂ ಯಾವುದೇ ಕ್ರಮವಹಿಸಿರುವುದಿಲ್ಲ. ಕುಕ್ಕಾಜೆ ಎಂಬಲ್ಲಿ ಜಾಗದ ಲಭ್ಯತೆಯಿದ್ದು ಅಲ್ಲಿ ಕೂಡ ಯಾವುದೇ ಕ್ರಮ ವಹಿಸಿರುವುದಿಲ್ಲ ಎಂದು ಹೇಳಿದರು.
2 ಕಡೆಗಳಲ್ಲಿ ಈಗಾಗಲೇ ಜಾಗ ಮಂಜೂರಾತಿಯಾಗಿದ್ದು ಜಾಗ ಸಮತಟ್ಟು ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೂ.0.60ಲಕ್ಷ ಅನುದಾನವನ್ನು ಮೀಸಲಿರಿಸಿ ಜಾಗವನ್ನು ಸಮತಟ್ಟು ಮಾಡಿದಾಗ, ಸದರಿ ಜಾಗವು ಮನೆ ನಿರ್ಮಾಣಕ್ಕೆ ಯೋಗ್ಯವಾಗಿರುವುದಿಲ್ಲ. ಕೌನ್ಸಿಲ್ ನಿಂದ ಗ್ರೂಪ್ ಹೌಸ್ ಮಾಡುವ ಬಗ್ಗೆ ಚರ್ಚೆ ನಡೆದಿದ್ದು ಫಲಾನುಭವಿಗಳು ಹೆಚ್ಚಿನ ಅನುದಾನವನ್ನು ಹಾಕಬೇಕಾಗುವುದರಿಂದ ಫಲಾನುಭವಿಗಳು ಯಾರೂ ಕೂಡ ಮುಂದೆ ಬರುವುದಿಲ್ಲವೆಂದು ತಿಳಿಸಲಾಗಿರುತ್ತದೆ. ಕುಕ್ಕಾಜೆಯಲ್ಲಿ ಜಾಗದ ಲಭ್ಯತೆಯಿದ್ದು ಮನೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೊಸದಾಗಿ 2 ಕಡೆಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು ತಹಶೀಲ್ದಾರರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಮುಖ್ಯಾಧಿಕಾರಿ, ಸುಳ್ಯ ನಗರ ಪಂಚಾಯತ್ ಇವರು ಸಭೆಗೆ ಮಾಹಿತಿಯನ್ನು ನೀಡಿದರು. ಈ ಬಗ್ಗೆ ವಸತಿ ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದೆಂದು ಮಾನ್ಯ ಸಭಾಧ್ಯಕ್ಷರು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡುವಂತೆ ಸಭಾಧ್ಯಕ್ಷರು ತಿಳಿಸಿದರು.















ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಿಸುವ ಬಗ್ಗೆ ಜಾಗ ಮಂಜೂರಾಗಿದ್ದು, ಅನುದಾನ ಬಿಡುಗಡೆಯಾಗಿರುವುದಿಲ್ಲವೆಂದು ನಾಮನಿರ್ದೇಶನ ಸದಸ್ಯರಾದ ಶ್ರೀಮತಿ ಸುಜಯ ಕೃಷ್ಣ ಇವರು ಪ್ರಸ್ತಾಪಿಸಿದಾಗ, ಉಪಕೇಂದ್ರ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದೆಂದು ಸಭಾಧ್ಯಕ್ಷರು ತಿಳಿಸಿದರು.
ಸುಳ್ಯ ತಾಲೂಕಿಗೆ 110 ಕೆ.ವಿ.ಯ ವಿದ್ಯುತ್ ಘಟಕ ಸ್ಥಾಪನೆ ತುಂಬಾ ವಿಳಂಬವಾಗುತ್ತಿರುವ ಪ್ರಸ್ತಾಪಿಸಿದರು. ಸ್ಟೇಷನ್ ಕಾಮಗಾರಿ ಪ್ರಗತಿಯಲ್ಲಿದ್ದು ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ಒಟ್ಟು 89 ಟವರ್ ಲೊಕೇಶನ್ ಗಳು ಬರುತ್ತಿದ್ದು 39 ಅರಣ್ಯ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಅನುದಾನವನ್ನು ಪಾವತಿ ಮಾಡಲಾಗಿರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಲೈನ್ ಗಳನ್ನು ತೆಗೆದುಕೊಂಡು ಹೋಗಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ಸಭೆ ನಡೆಸಲಾಗಿದ್ದು ಪ್ರಸ್ತುತ ಕಾಮಗಾರಿಗಳು ನಡೆಯುತ್ತಿದ್ದು ರೈತರು ಏಕ ಪರಿಹಾರವನ್ನು (ONE TIME COMPANSATION) ಕೇಳುತ್ತಿರುವುದರಿಂದ ಸಮಸ್ಯೆಯಾಗಿರುತ್ತದೆ. ಸರ್ಕಾರದ ಸುತ್ತೋಲೆ ಪ್ರಕಾರ 3 ಬಾರಿ ಪರಿಹಾರವನ್ನು ವಿತರಿಸಬೇಕಾಗಿರುತ್ತದೆ ಎಂದು ಕೆ.ಪಿ.ಟಿ.ಸಿ.ಎಲ್. ಕಾರ್ಯಕಾರಿ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು. ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಭಾಧ್ಯಕ್ಷರು ಸೂಚಿಸಿದರು.
ಸುಳ್ಯ ತಾಲೂಕಿನ ದುಗಲಡ್ಕ ಮತ್ತು ಕೊಯಿಕುಳಿ ಎಂಬಲ್ಲಿ 1 ಮತ್ತು 2 ನೇ ವಾರ್ಡ್‌ನಲ್ಲಿ ಜಲಸಿರಿ ಕಾಮಗಾರಿಗಳನ್ನು ನಿರ್ವಹಿಸಿರುವುದಿಲ್ಲ. ಆದುದರಿಂದ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಸುಜಯಕೃಷ್ಣರು ತಿಳಿಸಿದಾಗ, ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಭಾಧ್ಯಕ್ಷರು ಸೂಚಿಸಿದರು.
ಕಾಡು ಪ್ರಾಣಿಗಳಿಂದ ಕೃಷಿ ನಾಶ
ಗ್ರಾಮಾಂತರ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಕೃಷಿಗಳು ನಾಶವಾಗುತ್ತಿದೆ. ಅರಂತೋಡು, ಸಂಪಾಜೆ, ಅಜ್ಜಾವರ, ದಾಸನಹಳ್ಳಿ, ಅಜ್ಜನಕೋಡಿ, ಉಳುವಾರು, ಬಿಳಿಯಾರು ಇತ್ಯಾದಿ ಪ್ರದೇಶಗಳಲ್ಲಿ ಆನೆಗಳು ಬೀಡುಬಿಟ್ಟಿದ್ದು ಈ ಬಗ್ಗೆ ಅರಣ್ಯ ಇಲಾಖೆಯವರು ಸೂಕ್ತ ಕ್ರಮವಹಿಸುವಂತೆ ನಾಮನಿರ್ದೇಶಿತ ಸದಸ್ಯರಾದ ಶ್ರೀಮತಿ ಸುಜಯಕೃಷ್ಣರು ತಿಳಿಸಿದರು.










