ದ. ಕ. ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಎಲಿಮಲೆ ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆಯ ತನುಷ್ ಎಮ್ ಹೆಚ್ ಗೆ ಬಹುಮಾನ

0

ಜು. 20 ರಂದು ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ದಕ್ಷಿಣ ಕನ್ನಡ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಿನ್ನಿಗೋಳಿ ಇದರ ಜಂಟಿ ಆಯೋಗದಲ್ಲಿ ಯುಗಪುರುಷ ಸಭಾಭವನ ಕಿನ್ನಿಗೋಳಿ ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಮ್ಮ ಜ್ಞಾನದೀಪ ಶಾಲೆಯ 9ನೇ ತರಗತಿ ವಿದ್ಯಾರ್ಥಿಯಾದ ತನುಷ್ ಎಂ ಹೆಚ್ ಭಾಗವಹಿಸಿ ಹತ್ತರಿಂದ ಹದಿನಾಲ್ಕು ವರ್ಷದ ಒಳಗಿನ ಬ್ಲಾಕ್ ಬೆಂಡ್ ಸಬ್ ಜೂನಿಯರ್ ವಿಭಾಗದಲ್ಲಿ ಹಾಗೂ ಟ್ವಿಸ್ಟಿಂಗ್ ಸಬ್ ಜೂನಿಯರ್ ಪ್ರಥಮ ಸ್ಥಾನವನ್ನು ಮತ್ತು ಟ್ರೆಡಿಷನಲ್ ಸಬ್ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.