ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಜು.24 ರಂದು ಮುಂಜಾನೆ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಸಿ ಭಕ್ತರಿಗೆ ಹಾಲೆ ಮರದ ಕಷಾಯ ವಿತರಣೆ ನಡೆಯಿತು.









ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೇಶವ ಹೊಸೋಳಿಕೆ, ಸನತ್ ಮುಳುಗಾಡು, ಶಶಿಕಲಾ ಅಡ್ಡನಪಾರೆ, ಅರ್ಚಕ ಪರಮೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು. ಹಲವು ಭಕ್ತರು ಭಾಗವಹಿಸಿದ್ದರು.










