ಮಂಗಳೂರಿನ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆ ವಿಜ್ಡೋಮ್ ಫೌಂಡೇಶನ್ ಗುರು ಪೂರ್ಣಿಮ ದಿನದಂದು ಸುಳ್ಯದ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಪ್ರೊ. ಕೃಷ್ಣರಾಜ್ ಸುಳ್ಯರವರಿಗೆ ಡೈನಾಮಿಕ್ ಪರ್ಸನಾಲಿಟಿ ಅವಾರ್ಡ್ ನೀಡಿ ಗೌರವಿಸಿದ್ದಾರೆ.









ಮಂಗಳೂರಿನ ಒಶಿಯನ್ ಪರ್ಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರದ ಸಾಧಕ ಶಿಕ್ಷಕರನ್ನು ಗೌರವಿಸಲಾಗಿದ್ದು,
ಶೈಕ್ಷಣಿಕ,ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದ ಕೊಡುಗೆಗಾಗಿ ಕೃಷ್ಣರಾಜ್ ಸುಳ್ಯರವರನ್ನು ಗೌರವಿಸಲಾಯಿತು.
ಗುರುವಂದನ ಕಾರ್ಯಕ್ರಮದಲ್ಲಿ ಮಂಗಳೂರಿನ ಎಸಿಪಿ ಗೀತ ಕುಲಕರ್ಣಿ, ಸಂಸ್ಥೆಯ ಮುಖ್ಯಸ್ಥೆ ಡಾ.ಫ್ರಾನ್ಸಿಕ ತೇಜ್,
ಡಾ. ಗುರುತೇಜ್, ಮೈತ್ರೆಯ, ಡಾ. ರುಕ್ಸನಾ ಹಾಸಿಮ್, ಡಾ. ರಾಘವೇಂದ್ರ ಹೊಳ್ಳ ಉಪಸ್ಥಿತರಿದ್ದರು. ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದ್ದರು.










