ಬಾಳೆಮಕ್ಕಿ: ಅಪಾಯ ಆಹ್ವಾನಿಸುತ್ತಿರುವ ಫುಟ್ ಪಾತ್ ಸ್ಲ್ಯಾಬ್
ಕೆಸುವಿನ ಎಲೆ ಇಟ್ಟು ಎಚ್ಚರಿಸುವ ಪ್ರಯತ್ನ









ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನ ಮುಂಭಾಗ ಇರುವ ರಸ್ತೆಯ ಚರಂಡಿಗೆ ಹಾಕಿರುವ ಸ್ಲಾಬ್ ಕಲ್ಲು ಮುರಿದು ಬೀಳಲು ರೆಡಿಯಾಗಿದ್ದು ವಾಹನಗಳಿಗೆ, ಸಾರ್ವಜನಿಕರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಇದೀಗ ಅದರ ಮೇಲೆ ಕೆಸುವಿನ ಗಿಡವನ್ನು ಗೋಣಿಯಲ್ಲಿ ತುಂಬಿ ಇಟ್ಟು ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಲಾಗಿದೆ.ಕೂಡಲೇ ಸಂಬಂಧಪಟ್ಟ ಇಲಾಖೆ ಇದನ್ನು ದುರಸ್ತಿ ಪಡಿಸಿದರೆ ಮುಂದೆ ಉಂಟಾಗುವ ಅಪಾಯವನ್ನು ತಪ್ಪಿಸಬಹುದು.










