ಸುಳ್ಯ ವೆಲ್ಫೇರ್ ಅಸೋಸಿಯೇಷನ್ ಬಹರೈನ್ (SWA) ಇದರ ವಾರ್ಷಿಕ ಮಹಾಸಭೆಯು ಬಹರೈನ್ ಮನಾಮದಲ್ಲಿರುವ ಪಿಸಿ ಆಡಿಟೋರಿಯಂ ನಲ್ಲಿ ಸಿದ್ದೀಕ್ ಜಯನಗರ ಸುಳ್ಯ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.
ಅಬ್ದುಲ್ ಮಜೀದ್ ಸಅದಿ ಪೆರ್ಲ ಉಸ್ತಾದರ ದುವಾಶಿರ್ವಚನ ದೊಂದಿಗೆ ಸಭೆಗೆ ಚಾಲನೆ ನೀಡಲಾಯಿತು.
ಹಾಫಿಲ್ ಅಜ್ವದ್ ಅಬ್ದುಲ್ಲ ಅಲವಿ ಅವರು ಕಿರಾಅತ್ ಪಠಿಸಿದರು.









ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್ ಸಭೆಯಲ್ಲಿ ಸರ್ವರನ್ನೂ ಸ್ವಾಗತಿಸಿದರು.
ಸಭೆಯನ್ನು ಮುಸ್ಲಿಂ ವೆಲ್ಪೇರ್ ಮುಖ್ಯ ಉಪದೇಶಕರು ಮಹಮ್ಮದ್ ಸೀದಿ ಹಾಜಿ ಉದ್ಘಾಟಿಸಿದರು.
ಮಹಾಸಭೆ ವರದಿಯನ್ನು ಸಿದ್ದೀಕ್ ಎಣ್ಮೂರು ವಾಚಿಸಿ,
ವಾರ್ಷಿಕ ವರದಿಯನ್ನು ಸೂಫಿ ಪೈoಬಚ್ಚಾಲ್ ವಾಚಿಸಿದರು.
ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ರಿಯಾಝ್ ಸುಳ್ಯ ರವರ ಅನುಪ ಸ್ಥಿತಿಯಲ್ಲಿ ಫಹಿಮ್ ಫಕ್ರುದ್ದೀನ್ ಮಂಡಿಸಿದರು, ಎಕ್ಸಟರ್ನಲ್ ಆಡಿಟರ್ ಅಕ್ಬರ್ ಅಲಿ ಯವರು ಆಡಿಟ್ ರಿಪೋರ್ಟ್ ಮಂಡಿಸಿದರು. ಮುಖ್ಯ ನಿರ್ದೇಶಕರು ಮಹಮದ್ ಸೀದಿ ಹಾಜಿ, ನಿರ್ದೇಶಕರುಗಳಾದ ಹಾಜಿ ಅಬ್ದುಲ್ಲ ಅಲವಿ, ಫಕ್ರುದ್ದೀನ್ ಹಾಜಿ ಯವರು ಮಾತನಾಡಿ ಕಾರ್ಯಕರ್ತರಿಗೆ ಪ್ರೋತ್ಸಾಹ ಮತ್ತು ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ನಂತರ ಚುನಾವಣಾ ಅಧಿಕಾರಿ ಹಾಜಿ ಅಬೂಬಕ್ಕರ್ ಇರಿಗಂಣ್ಣೂರ್ ಅವರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತ್ತು.
ಅಧ್ಯಕ್ಷರಾಗಿ ಸಿದ್ದೀಕ್ ಜಯನಗರ ಸುಳ್ಯ, ಉಪಾಧ್ಯಕ್ಷರಾಗಿ ಅಶ್ರಫ್ TK, ಮಜೀದ್ ಝುಹ್ರಿ, ಕಾರ್ಯದರ್ಶಿ ಸೂಫಿ ಪೈoಬಚ್ಚಾಲ್ , ಜೊತೆ ಕಾರ್ಯದರ್ಶಿ ಯಾಗಿ ಸಿದ್ದೀಕ್ ಎಣ್ಮೂರು, ಮಜೀದ್ ಪೈoಬಚ್ಚಾಲ್, ಕೋಶಾಧಿಕಾರಿ ರಿಯಾಝ್ ಸುಳ್ಯ , devlopment ಕಮೀಟಿ ಚೇರ್ಮನ್ ಲತೀಫ್ ಪೆರೋಳಿ, ಇಂಟರ್ನಲ್ ಆಡಿಟರ್ ಆಗಿ ಫಹಿಮ್ ಫಕ್ರುದ್ದೀನ್, ಮುಖ್ಯ ಉಪದೇಶಕರಾಗಿ ಮಹಮದ್ ಸೀದಿ ಹಾಜಿ, ಉಪದೇಶಕರಾಗಿ ಅಬ್ದುಲ್ಲ ಅಲವಿ ಹಾಜಿ, ಫಕ್ರುದ್ದೀನ್ ಹಾಜಿ ಇವರನ್ನು ಸಭೆಯಲ್ಲಿ ಆರಿಸಲಾಯಿತು.
ಸಭೆಯಲ್ಲಿ ಮಜೀದ್ ಮಾದಾಪುರ, ಹನೀಫ್ ಮುಸ್ಲಿಯಾರ್, ಮಜೀದ್ ಝುಹ್ರಿ, ಅಶ್ರಫ್ TK, ಶುಭಹಾರೈಸಿ ಮಾತನಾಡಿದರು, ಸಭೆಯ ಕೊನೆಯಲ್ಲಿ ಸೂಪಿ ಪೈoಬಚ್ಚಾಲ್ ಧನ್ಯವಾದ ಅರ್ಪಿಸಿದರು, ಅಬ್ದುಲ್ ಮಜೀದ್ ಸಅದಿ ಉಸ್ತಾದ್ ರವರು ಪ್ರಮಾಣ ವಚನ ಬೋಧಿಸಿ ನಮ್ಮಿಂದ ಅಗಲಿದ ಕಾರ್ಯಕರ್ತರು, ಮುಖಂಡರು ಬಂದು ಮಿತ್ರಾದಿಗಳಿಗಾಗಿ ದುಆ ಮಾಡಿದರು.










