ಕೆವಿಜಿ ಐಪಿಎಸ್ ನ ಮಕ್ಕಳ ಕೆಸರುಗದ್ದೆ ಹಬ್ಬ

0

ವಿದ್ಯಾರ್ಥಿಗಳ ಆರೋಗ್ಯ ಬೆಳವಣಿಗೆಗೆ ಕೆಸರುಗದ್ದೆ ಆಟ ಅತೀ ಉತ್ತಮವಾದ ಆಟ : ಮನಮೋಹನ ಪುತ್ತಿಲ

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಕಾಂತಮಂಗಲದ ಮನಮೋಹನ ಪುತ್ತಿಲರ ಗದ್ದೆಯಲ್ಲಿ ಜು .26ರಂದು ಕೆಸರುಗದ್ದೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.


ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕಮಿಟಿ ಬಿ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್, ಕೆವಿಜಿ ಡೆಂಟಲ್ ಕಾಲೇಜಿನ ನಿರ್ದೇಶಕ ಮೌರ್ಯ ಆರ್ ಕುರುಂಜಿ, ಕೆವಿಜಿ ಆಡಳಿತ ಮಂಡಳಿ ಕಮಿಟಿ ಬಿ ವಿಭಾಗದ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಮನಮೋಹನ್ ಪುತ್ತಿಲ ಮತ್ತು ಶ್ರೀಮತಿ ತುಳಸಿ ಹಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಶಿಕ್ಷಕಿ ಶ್ರೀಮತಿ ಹೇಮಾ ವೈಲಾಯರವರು ಹಾಡನ್ನು ಹೇಳುತ್ತಾ, ಉಳಿದವರು ಅವರ ಹಾಡನ್ನು ಅನುಕರಿಸುತ್ತಾ ಗದ್ದೆಗೆ ಇಳಿದು ನಾಟಿ ಮಾಡುವುದು ಹೇಗೆ ಎಂಬುದಾಗಿ ತಿಳಿಸಿ ಕೊಟ್ಟರು . ಬಳಿಕ 10ನೇ ತರಗತಿಯ ಸ್ಕಂದ ದಿಯಾ ಕಲ್ಲಾಜೆ ಕೆಸರುಗದ್ದೆಯಲ್ಲಿ ಆಟವಾಡುವುದರಿಂದ ಆರೋಗ್ಯ ವೃದ್ದಿಯಾಗುತ್ತದೆ ಎಂಬ ವೈಜ್ಞಾನಿಕ ಕಾರಣದ ಬಗ್ಗೆ ತಿಳಿಸಿದಳು. ಬಳಿಕ ಗದ್ದೆಯನ್ನು ಕಲ್ಪಿಸಿಕೊಟ್ಟಂತಹ ಶ್ರೀಮತಿ ತುಳಸಿ ಮತ್ತು ಮನಮೋಹನ ಪುತ್ತಿಲರವರಿಗೆ ಗೌರವಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮನಮೋಹನ ಪುತ್ತಿಲರವರು “ವಿದ್ಯಾರ್ಥಿಗಳ ಆರೋಗ್ಯ ಬೆಳವಣಿಗೆಗೆ ಕೆಸರು ಗದ್ದೆ ಆಟ ಒಂದು ಉತ್ತಮ ಆಟ ಎಂದು ‘ ಹೇಳಿದರು”. ಆಮೇಲೆ ಶಾಲಾ ವಿದ್ಯಾರ್ಥಿನಿಯರು ಸುಗ್ಗಿ ಹಾಡು, ನೃತ್ಯವನ್ನು ಮಾಡಿ ಮನರಂಜಿಸಿದರು. ಬಳಿಕ ಭವಾನಿ ಶಂಕರ ಅಡ್ತಲೆ ಕೆಸರುಗದ್ದೆ ಆಟದ ಮಹತ್ವವನ್ನು ತಿಳಿಸಿದರು.


ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳ ದೈಹಿಕ ಮತ್ತು ಆರೋಗ್ಯ ವೃದ್ಧಿಗಾಗಿ ಕೆಸರುಗದ್ದೆ ಆಟ ಅತ್ಯುತ್ತಮ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಹಲವಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು 9ನೇ ತರಗತಿಯ ನಿಧಿ ಮತ್ತು ಪ್ರತಿಕ್ಷ ನಿರೂಪಿಸಿದರು. ಹತ್ತನೇ ತರಗತಿಯ ಮನ್ವಿತ ಸಿ. ಎಚ್. ಸ್ವಾಗತಿಸಿ, ಸೋನಾ ನಾರ್ಕೋಡು ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು, ಊರಿನ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.