ಅಜ್ಜಾವರದಲ್ಲಿ ಆಧಾರ್ ನೋಂದಣಿ ಶಿಬಿರ

0

ಅಜ್ಜಾವರ ಗ್ರಾಮ ಪಂಚಾಯತ್ ನಲ್ಲಿ ಅಜ್ಜಾವರ ಗ್ಯಾರಂಟಿ ಅನುಷ್ಠಾನ ಸಮಿತಿ.ಹಾಗೂ ಪುತೂರ್ ಅಂಚೆ ಇಲಾಖೆ ವತಿಯಿಂದ ಆಧಾರ್ ನೋಂದಣಿ ತಿದ್ದುಪಡಿ ಶಿಬಿರ ನಡೆಯಿತು.

ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಎ.ಬಿ ಅಡ್ಕ ಇವರ ಮುತುವರ್ಜಿಯಲ್ಲಿ ಶಿಬಿರ‌ ಆಯೋಜನೆಗೊಂಡಿತು.

ಈ ಸಂದರ್ಭದಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಕಿ ಕಾಟಿಪಳ್ಳ, ಉಪಾಧ್ಯಕ್ಷರಾದ ಅಬ್ದುಲ್ಲ ಅಜ್ಜಾವರ, ಪಂಚಾಯತ್ ಸದಸ್ಯರಾದ ಲೀಲಾ ಮನಮೋಹನ್, ಸತ್ಯವತಿ ಬಸವನಪಾದೆ, ಜಯರಾಮ್ ತುದಿಯಡ್ಕ, ದಿವ್ಯ ಪಡ್ಡಂಬೈಲು, ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜಿತ್ ರೈ, ಅಜ್ಜಾವರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಜಯಮಾಲ, ಹಾಗೂ ಉಮ್ಮರ್ ಬಯಂಬು, ಕಾರ್ತಿಕ್, ಲೋಕೇಶ್, ಲೀಲಾ, ಹೇಮ, ಕಮಲ, ಪವಿತ್ರ ಮಾವಿನಪಳ್ಳ, ಅಜ್ಜಾವರ ಅಂಚೆ ಪಾಲಕರಾದ ಶಾಲಿನಿ, ಆಧಾರ್ ನೊಂದಣಿ ಪಾಲಕರಾದ ದರ್ಶನ್ ಪಂಜ ರವರು ಸಹಕರಿಸಿದರು.

100 ಕ್ಕೂ ಅಧಿಕ ಮಂದಿ ಪ್ರಯೋಜನ ಪಡೆದರು.