
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಸಂಹಿತ ಮತ್ತು ಸಿದ್ಧಾಂತ ವಿಭಾಗದ ನೇತೃತ್ವದಲ್ಲಿ ‘ಸ್ಮೃತಿ ಪ್ರಸ್ಥಾನ’ ಚರಕ ಜಯಂತಿಯನ್ನು ಜು. 29 ರಂದು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರಿನ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಸುಚಿತ್ರ ಪಿ ಎಸ್ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ “ಆಯುರ್ವೇದ ಗ್ರಂಥಗಳು ಕೇವಲ ಪುಸ್ತಕವಲ್ಲ, ಅದು ಶಾಸ್ತ್ರ ಎಂಬುದಾಗಿ ತಿಳಿಸುತ್ತಾ ಇದರ ಮಹತ್ವ ಹಾಗೂ ಈ ಶಾಸ್ತ್ರದಿಂದ ಚಿಕಿತ್ಸಾ ಪದ್ಧತಿಯಲ್ಲಿ ಉಪಯುಕ್ತವಾಗುವ ವಿಧಾನಗಳನ್ನು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಲೀಲಾಧರ್ ಡಿ ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಗುರು ಶಿಷ್ಯ ಪರಂಪರೆಯು ನಡೆದು ಬಂದ ರೀತಿ ಹಾಗೂ ಪ್ರಸ್ತುತ ಸ್ಥಿತಿಯಲ್ಲಿ ಈ ಪರಂಪರೆಯಲ್ಲಿ ಮೂಡಿರುವ ಬೆಳವಣಿಗೆಯ ಸಾಧಕ ಮತ್ತು ಭಾದಕಗಳನ್ನು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಹರ್ಷಿತಾ ಎಂ, ಕಾಲೇಜಿನ ಸಂಹಿತ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥ ಡಾ. ಶ್ರೀಜ ಎಸ್ ಉಪಸ್ಥಿತರಿದ್ದರು.
















ಕಾರ್ಯಕ್ರಮದ ಅಂಗವಾಗಿ ವಿಧ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ವಿವಿಧ ಸ್ಪರ್ಧೆಗಳನ್ನು ಸಂಹಿತ ಮತ್ತು ಸಿದ್ಧಾಂತ ವಿಭಾಗದ ನೇತೃತ್ವದಲ್ಲಿ ಆಯೋಜಿಸಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ನಂತರ ಆಚಾರ್ಯ ಚರಕ ಹಾಗೂ ಆಯುರ್ವೇದದ ಕುರಿತು ನಾಟಕವನ್ನು ವಿಧ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರುಗಳು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಹಿತ ಮತ್ತು ಸಿದ್ಧಾಂತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ವಿಷ್ಣು ಕೃಷ್ಣನ್ ಯು. ಸ್ವಾಗತಿಸಿ , ಡಾ. ಗೋಪಿಕೃಷ್ಣನ್ ಪಿ. ಟಿ., ವಂದಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಪ್ರಸನ್ನ ಮತ್ತು ಬಳಗದವರು ಪ್ರಾರ್ಥಿಸಿ, ಶ್ರೇಯಸ್ ಶೇಖರ್, ಮಾನ್ಯ ಅಂಬೆಕಲ್ಲು ಹಾಗೂ ತೇಜಸ್ ನಿರೂಪಿಸಿದರು.










