ಸುಳ್ಯ ಮಾದರಿ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶೀಲಾವತಿ ಬಿ.ಎ. ಸೇವಾ ನಿವೃತ್ತಿ

0

ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಶೀಲಾವತಿ ಬಿ.ಎ.ಯವರು ಜು.೩೧ರಂದು ಸೇವೆಯಿಂದ ನಿವೃತ್ತಿ ಹೊಂದಿದರು.

ವಿದ್ಯಾಭ್ಯಾಸದ ಬಳಿಕ ೧೯೯೬ರಲ್ಲಿ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಿದ ಇವರು, ೧೯೯೬ ರಲ್ಲಿ ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆಗೆ ಸೇರಿದರು. ಅಲ್ಲಿ ೬ ವರ್ಷ ಸೇವೆ ಸಲ್ಲಿಸಿದ ಇವರು, ೨೦೦೨ರಲ್ಲಿ ಪೇರಾಲು ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡರು. ಅಲ್ಲಿ ೧೩ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ೨೦೦೫ ರಲ್ಲಿ ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯನಿರ್ವಹಿಸಿದರು. ಇಲ್ಲಿ ಸುಮಾರು ೧೦ ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ೨೯ ವರ್ಷಗಳ ಸೇವೆ ಸಲ್ಲಿಸಿರುವ ಇವರು ಜು.೩೧ರಂದು ನಿವೃತ್ತಿ ಹೊಂದಿದರು.

ಶೀಲಾವತಿಯವರು ತಾವು ಸೇವೆ ಸಲ್ಲಿಸಿದ್ದ ಎಲ್ಲ ಶಾಲೆಗಳಲ್ಲಿ ಮೂಲಭೂತ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಆಲೆಟ್ಟಿ ಗ್ರಾಮದ ಭೂತಕಲ್ಲು ಆನಂದ ಗೌಡ – ದೇವಕಿ ದಂಪತಿಗಳ ಪುತ್ರಿಯಾಗಿರುವ ಶೀಲಾವತಿಯವರು, ಮಂಡೆಕೋಲು ಗ್ರಾಮದ ಕೇನಾಜೆ ನಿವಾಸಿ, ಮುಳ್ಯ ಅಟ್ಲೂರು ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶಿವರಾಮ ಕೇನಾಜೆಯವರ ಪತ್ನಿ.
ಹಿರಿಯ ಪುತ್ರಿ ಆಶಾ ತಿರುಮಲೇಶ್ ಬಿ.ಇ. ಎಂಟೆಕ್ ಮಾಡಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೋರ್ವ ಪುತ್ರಿ ಹರ್ಷಿತಾ ಶರತ್ ಬಿ.ಇ. ಮಾಡಿ ಗ್ವಾಲಿಯರ್ನಲ್ಲಿ ಉದ್ಯೋಗದಲ್ಲಿದ್ದಾರೆ. ಮಗ ಅಭಿಷೇಕ್ ಕೆ.ಎಸ್. ಇಂಜಿನಿಯರಿಂಗ್ ಪದವೀಧರರಾಗಿದ್ದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.