ಕುಂಬ್ರ ಕೆ.ಪಿ.ಎಸ್. ಶಾಲೆಯ ದೈ.ಶಿಕ್ಷಣ ಶಿಕ್ಷಕಿ ಶ್ರೀಮತಿ ಚಂದ್ರಕಲಾ ಇಂದ್ರನಾಥ್ ನಿವೃತ್ತಿ

0

ಪುತ್ತೂರು ತಾಲೂಕು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶ್ರೀಮತಿ ಚಂದ್ರಕಲಾ ಇಂದ್ರನಾಥ್ ಕರ್ಲಪ್ಪಾಡಿಯವರು ಜು.೩೧ರಂದು ಸೇವಾ ನಿವೃತ್ತಿ ಹೊಂದಿದರು.

ಮರ್ಕಂಜ ಗ್ರಾಮದ ಪುರ ವೆಂಕಪ್ಪ ಗೌಡ – ಕೇಸರಿ ದಂಪತಿಗಳ ಪುತ್ರಿಯಾಗಿರುವ ಚಂದ್ರಕಲಾರವರು ವಿದ್ಯಾಭ್ಯಾಸದ ಬಳಿಕ, ೧೯೯೪ರಲ್ಲಿ ಕುಂತೂರು ಸ.ಉ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡರು. ಅಲ್ಲಿ ೨೧ ವರ್ಷ ೬ ತಿಂಗಳು ಸೇವೆ ಸಲ್ಲಿಸಿದ ಇವರು, ೨೦೧೬ರಲ್ಲಿ ಕುಂಬ್ರ ಕೆಪಿಎಸ್ ಶಾಲೆಗೆ ವರ್ಗಾವಣೆಗೊಂಡರು. ಸುದೀರ್ಘ ೩೦ ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಸೇವೆ ಸಲ್ಲಿಸಿರುವ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ.
ಚಂದ್ರಕಲಾರವರು ಅಜ್ಜಾವರ ಗ್ರಾಮದ ಕರ್ಲಪ್ಫಾಡಿ, ನಿವೃತ್ತ ಮುಖ್ಯೋಪಾಧ್ಯಾಯ ದಿ| ಇಂದ್ರನಾಥ್ ಕರ್ಲಪ್ಪಾಡಿಯವರ ಪತ್ನಿ. ಇವರ ಮಗ ಪ್ರಜ್ವಲ್ ಕರ್ಲಪ್ಪಾಡಿ ಸುಳ್ಯ ತಾಲೂಕು ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ.