ದೇವಚಳ್ಳ ಶಾಲೆಯಲ್ಲಿ ಒಡಿಯೂರು ಶ್ರೀಗಳ ಜನ್ಮದಿನೊತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

0

ದೇವಚಳ್ಳ ಗ್ರಾಮದ ಒಡಿಯೂರ್ ಶ್ರೀ ಗ್ರಾಮ ವಿಕಾಸ ಯೋಜನೆಯ ದೇವಚಳ್ಳ ಘಟ ಸಮಿತಿಯ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇಲ್ಲಿ ಒಡಿಯೂರು ಶ್ರೀಗಳ ಜನ್ಮದಿನೊತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ವನ್ನು ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಸ್ವಚ್ಛತಾ ಜಾಗ್ರತಿ ಬಗ್ಗೆ ಡಾ. ಮಹೇಶ್ ಮಾಹಿತಿ ನೀಡಿದರು.

ದೇವಚಳ್ಳ ಶಾಲಾ ಮುಖ್ಯ ಗುರುಗಳು ಶ್ರೀಧರ ಗೌಡ ಕೆ. ಮತ್ತು ಶಿಕ್ಷಕ ವೃಂದ ದವರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಉಪಾಧ್ಯಕ್ಷರಾದ ಶ್ರೀಮತಿ ದಿವ್ಯಾ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವಂದನಾ ಕೆ, ದೇವಚಳ್ಳ ಘಟಸಮಿತಿ ಅಧ್ಯಕ್ಷರಾದ ಸತೀಶ್ ರೈ ಅಲ್ಪೆ, ಕಾರ್ಯದರ್ಶಿ ಶ್ರೀಮತಿ ಭವ್ಯ, ದೇವಚಳ್ಳ ಗ್ರಾಮದ ಸೇವಾದೀಕ್ಷತೆ ಹಾಗೂ ಪದಾಧಿಕಾರಿಗಳು, ದೇವಚಳ್ಳ ಗ್ರಾಮದ ಆಶಾ ಕಾರ್ಯಕರ್ತೆ ಶ್ರೀಮತಿ ನಿರ್ಮಲ, ಮಿತ್ರ ಯುವಕ ಮಂಡಲದ ಅಧ್ಯಕ್ಷರು, ಸ್ನೇಹ ಯುವಕ ಮಂಡಲ ತಳೂರು ಇದರ ಅಧ್ಯಕ್ಷರಾದ ಹರೀಶ್ ಪಟ್ಟೆ, ಸೌರಭ ಯುವತಿ ಮಂಡಲ ಇದರ ಅಧ್ಯಕ್ಷರಾದ ಶ್ರೀಮತಿ ಯಶೋದಾ ಪಟ್ಟೆ, ಶಿವಾಜಿ ಫ್ರೆಂಡ್ಸ್ ಕ್ಲಬ್ ಏಲಿಮಲೆ ಇದರ ಅಧ್ಯಕ್ಷರಾದ ವಿನಯ್ ಕುಮಾರ್, ದೇವಚಳ್ಳ ಶಾಲಾ ಮಕ್ಕಳ ಪೋಷಕರು ಒಡಿಯೂರ್ ಗ್ರಾಮವಿಕಾಸ ಯೋಜನೆಯ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.