ಮರ್ಕಂಜ ನಿವಾಸಿ ನಿವೃತ್ತ ಪೊಲೀಸ್ ಅಧಿಕಾರಿ ಆನಂದ ಗೌಡ ನರಿಯೂರು ಮತ್ತು ನಿವೃತ್ತ ಶಿಕ್ಷಕಿ ತೀರ್ಥಕುಮಾರಿ ದಂಪತಿಗಳ ಹುಟ್ಟು ಹಬ್ಬವನ್ನು ಸುಳ್ಯ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ಅ.1 ರಂದು ಆಚರಿಸಿದರು.
ಶಾಲೆಯ ಮಕ್ಕಳು ದೀಪಬೆಳಗಿಸಿ ಹುಟ್ಟು ಹಬ್ಬ ಆಚರಣೆಗೆ ಚಾಲನೆ ನೀಡಿದರು.















ಸಾಂದೀಪ್ ಶಾಲೆಯ ಅಧ್ಯಕ್ಷ ಎಂ ಬಿ ಸದಾಶಿವ ಹುಟ್ಟು ಹಬ್ಬ ಆಚರಿಸಿದ ದಂಪತಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

ಅನಂದ ಗೌಡ ದಂಪತಿಗಳ ಕಿರಿಯ ಅನೂಪ್ ನರಿಯೂರು,ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಹಾಗೂ ಎಂ ಬಿ ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
ಸಾಂದೀಪ್ ವಿಶೇಷ ಮಕ್ಕಳು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಸಾಂದೀಪ್ ಶಾಲೆಯ ಮಕ್ಕಳ ಜೊತೆ ಭೋಜನ ಸವಿದು ಮಕ್ಕಳಿಗೆ ಸಿಹಿ ಹಂಚಿದರು










