ಕುಕ್ಕುಜಡ್ಕ: ಕೆ ಎಸ್ ಆರ್ ಟಿ ಸಿ ಬಸ್‌ಗೆ ಸೈಡ್ ಕೊಡಲು ಹೋಗಿ ಸಂಚಾರಿ ಆರೋಗ್ಯ ಘಟಕದ ಬಸ್ ಚರಂಡಿಗೆ

0

ಕುಕ್ಕುಜಡ್ಕ ಬಳಿ ಕೆ ಎಸ್ ಅರ್ ಟಿ ಸಿ ಬಸ್‌ಗೆ ಸೈಡು ಕೊಡಲು ಹೋಗಿ ಸಂಚಾರಿ ಆರೋಗ್ಯ ಘಟಕದ ಬಸ್ ಚರಂಡಿಗೆ ಇಳಿದ ಘಟನೆ ಆ. ೧೧ ರಂದು ವರದಿಯಾಗಿದೆ.

ಕುಕ್ಕುಜಡ್ಕ ದಿಂದ ಅಜ್ಜನಗದ್ದೆ ಕಡೆ ಬರುತಿದ್ದ ಕೆ ಎಸ್ ಅರ್ ಟಿ ಸಿ ಬಸ್ಸಿಗೆ ಸಂಚಾರಿ ಆರೋಗ್ಯ ಘಟಕದ ಬಸ್ ಸೈಡು ನೀಡಲು ಹೋಗಿ ಈ ಘಟನೆ ಸಂಭವಿಸಿದೆ. ರಸ್ತೆ ಬದಿಯಲ್ಲಿ ನಿರ್ಮಿಸಿರುವ ಅವೈಜ್ಞಾನಿಕವಾಗಿ ಪೈಪ್ಲೈನ್ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಕಣಿಯನ್ನು ಸರಿಯಾಗಿ ಗಟ್ಟಿ ಮಾಡಿ ಮುಚ್ಚದಿರುವುದರಿಂದ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಕೂಡಲೇ ಪಿಡಬ್ಲ್ಯೂಡಿ ಅಥವಾ ಆ ಕಾಂಟ್ರಾಕ್ಟರ್ ತೆಗೆದುಕೊಂಡಿರುವ ಇಂಜಿನಿಯರ್ ಈ ವ್ಯವಸ್ಥೆಯನ್ನು ಆದಷ್ಟು ಬೇಗ ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದೆಂದು ಎಚ್ಚರಿಕೆಯನ್ನೂ ನೀಡಿದ್ದಾರೆ.