ಕಳಂಜ ಶರವಣಭವ ಸಿಂಗಾರಿಮೇಳ 2ನೇ ವರ್ಷಕ್ಕೆ ಪಾದಾರ್ಪಣೆ, ಕೋಟೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ

0

ಕಳಂಜ ಗ್ರಾಮದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಆರಂಭಗೊಂಡ ಶರವಣಭವ ಸಿಂಗಾರಿ ಮೇಳ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಂಡದ ವ್ಯವಸ್ಥಾಪಕರಾದ ಕೋಟೆ ದೇವಸ್ಥಾನದ ಅರ್ಚಕರಾದ ಪವನ್ ಕುಮಾರ್ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿದರು.

ತಂಡದ ಮುಖ್ಯಸ್ಥರುಗಳಾದ ಧನುಷ್ ಮುಂಡುಗಾರು, ತನ್ವಿತ್ ಎನ್ ಬೆಳ್ಳಾರೆ, ಮೊನೀಶ್ ಬೆಟ್ಟಂಪಾಡಿ, ಅಂಕಿತ್ ಬೆಟ್ಟಂಪಾಡಿ, ರಕ್ಷಿತ್ ಬಾಳಿಲ, ಪ್ರಜ್ವಲ್ ಬೊಳಿಯೂರು, ಚೇತನ್ ಬಳ್ಪ, ರೋಹಿತ್ ಅಡ್ಕಾರ್, ಮನೀಶ್ ಅಡ್ಕರ್, ತಿಲೇಶ್ ಬೆಟ್ಟಂಪಾಡಿ, ಧನುಷ್ ಆಚಾರ್, ಆದರ್ಶ ಶಂಕರ ಬೆಳ್ಳಾರೆ, ಕೌಶಿಕ್ ಮಾಪಲಗುಂಡಿ, ಆಶ್ಲೇಷ ಕಳಂಜ, ಜಿತೇಶ್ ಕಳಂಜ, ಗಗನ್ ಕಳಂಜ, ಚಿಂತನ್ ಬಂಡಾರಿ, ನಿತಿನ್ ಕಿಲಂಗೋಡಿ, ಲೋಹಿತ್ ಶೇಣಿ, ಷಣ್ಮುಖ ಚಿದ್ಗಲ್, ಅಧಿತ್ಯ ಬಾಳಿಲ, ನಿಂಗರಾಜ್, ಲಿಖಿತಾ ಕಲ್ಮಡ್ಕ, ಪೂರ್ಣಿಮಾ ಮಾಪಲಗುಂಡಿ, ಸೌಮ್ಯ ಮೋಟುತನ, ಸಂದ್ಯಾ ಬಾಳಿಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ತಂಡದ ಎಲ್ಲಾ ಸದಸ್ಯರಿಗೆ ಟೀ-ಶರ್ಟ್ ನೀಡಿ ನಾಮಫಲಕವನ್ನು ಬಿಡುಗಡೆ ಮಾಡಲಾಯಿತು.