ಇರುವಂಬಳ್ಳ ಕಾಲು ಸೇತುವೆ ಕುಸಿದು ಅಪಾಯದಲ್ಲಿದೆ…!

0

ಶಾಸಕರು, ತಾಲೂಕು ಆಡಳಿತ ಸಮಸ್ಯೆ‌ ನಿವಾರಿಸುವರೇ?

ಅಜ್ಜಾವರ ಗ್ರಾಮದ ಇರುವಂಬಳ್ಳ – ಅತ್ಯಾಡಿ – ಕುತ್ಯಾಡಿಯನ್ನು ಸಂಪರ್ಕಿಸುವ ಇರುವಂಬಳ್ಳ ಕಾಲು ಸೇತುವೆ ವಿಪರೀತವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಕುಸಿದಿದ್ದು ಅಪಾಯದ ಸ್ಥಿತಿಯಲ್ಲಿ ಇದೆ.

ಈ ಕಾಲು ಸೇತುವೆಯ ಮೂಲಕ ಸಾರ್ವಜನಿಕರಲ್ಲದೆ ಶಾಲಾ – ಮದ್ರಸಗಳಿಗೆ ಹೋಗುವ ಸಣ್ಣ ಪುಟ್ಟ ಮಕ್ಕಳು ದಿನನಿತ್ಯ ಹೋಗಿ ಬರುತ್ತಿದ್ದಾರೆ.

ಈ ದಾರಿಯಲ್ಲದೆ ಇದನ್ನು ಅವಲಂಬಿಸಿರುವವರಿಗೆ ಹತ್ತಿರದ ಅನ್ಯದಾರಿ ಇಲ್ಲ.
ಅನ್ಯದಾರಿ ಅದೆಷ್ಟೋ ಸುತ್ತುಬಳಿಸಿ ಹೋಗಿ ಬರಬೇಕಾಗಿರುವುದರಿಂದ ಈ ಸಣ್ಣ ಪುಟ್ಟ ಮಕ್ಕಳಿಗೆ ಇದು ಸಾಧ್ಯವಿಲ್ಲ.

ಆದ್ದರಿಂದ ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅಪಾಯದ ಸ್ಥಿಯಲ್ಲಿರುವ ಈ ಕಾಲು ಸೇತುವೆಗೆ ಬದಲಾಗಿ ಹೊಸ ಕಾಲು ಸೇತುವೆ ಅತೀ ಶೀಘ್ರವಾಗಿ ಆಗಬೇಕಾಗಿದೆ. ತಾತ್ಕಾಲಿಕವಾಗಿಯಾದರೂ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಶಾಸಕರು, ತಾಲೂಕು ಆಡಳಿತ, ಜಿಲ್ಲಾಡಳಿತ ಮಾಡಿಕೊಡಬೇಕೆಂದು ಈ ಭಾಗದ ಜನರು ವಿನಂತಿಸುತ್ತಿದ್ದಾರೆ.