ಪಂಜ: ಶ್ರೀ ಕಾಚು ಕುಚುಂಬ ದೈವದ ನೂತನ ದೈವಸ್ಥಾನದ ದಾರಂದ ಮುಹೂರ್ತ

0

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಕಾಚು ಕುಚುಂಬ ದೈವದ ನೂತನ ದೈವಸ್ಥಾನದ ದಾರಂದ ಮುಹೂರ್ತ ಆ.18 ರಂದು ನಡೆಯಿತು.


ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಡಾ.ದೇವಿಪ್ರಸಾದ್ ಕಾನತ್ತೂರ್, ದೇಗುಲದ ಗೌರವ ಸಲಹೆಗಾರರಾದ ಹಾಗೂ ಹಲಸಿನ ಮರದ ಬಾಗಿಲು ದಾರಂದವನ್ನು ಕೊಡುಗೆ ಯಾಗಿ ನೀಡಿರುವ ಮಹೇಶ್ ಕುಮಾರ್ ಕರಿಕ್ಕಳ, ಗೌರವ ಸಲಹೆಗಾರರಾದ ಉಮೇಶ್ ಬುಡೆಂಗಿ ಬಳ್ಪ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಮಾಯಿಲಪ್ಪ ಗೌಡ ಪಟ್ಟೆ ಎಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೇಶವ ಗೌಡ ಕುದ್ವ, ಶ್ರೀಮತಿ ಶಿಲ್ಪಾ ಮಹೇಶ್ ಕುಮಾರ್ ಕರಿಕ್ಕಳ, ಶ್ರೀಮತಿ ಪುಷ್ಪಾ ಡಿ ಪ್ರಸಾದ್ ಕಾನತ್ತೂರ್,ಹಾಗೂ ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.