ನೂತನ ಆಡಳಿತಾಧಿಕಾರಿ ಸುಜು ವೈ.ಎಸ್.ರವರಿಗೆ ಸ್ವಾಗತ ಕಾರ್ಯಕ್ರಮ
ಕಾನೂನಿನ ಚೌಕಟ್ಟಿನೊಳಗೆ ಜನರೊಂದಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ – ಎಸ್.ಎನ್.ಮನ್ಮಥ















ಐವರ್ನಾಡಿನಲ್ಲಿ ಮೂರುವರೆ ವರ್ಷಗಳ ಕಾಲ ಗ್ರಾಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಜನ್ ಕೆ.ಆರ್.ರವರಿಗೆ ಬೀಳ್ಕೊಡುಗೆ ಮತ್ತು ನೂತನ ಆಡಳಿತಾಧಿಕಾರಿಯಾಗಿ ಆಗಮಿಸಿದ ಸುಜು ವೈ.ಎಸ್.ರವರಿಗೆ ಸ್ವಾಗತ ಕಾರ್ಯಕ್ರಮವು ಆ.18 ರಂದು ಐವರ್ನಾಡು ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಮೂರುವರೆ ವರ್ಷಗಳ ಕಾಲ ಗ್ರಾಮದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಸುಜನ್ ಕೆ.ಆರ್.ರವರು ಗ್ರಾಮದಲ್ಲಿ ಜನರೊಂದಿಗೆ ಉತ್ತಮ ಬಾಂದವ್ಯವನ್ನು ಇಟ್ಟುಕೊಂಡು ಜನರಿಗೆ ಸ್ಪಂದಿಸಿದ್ದಾರೆ.ಕಾನೂನಿನ ಚೌಕಟ್ಟಿನಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.

ಒಳ್ಳೆಯ ಕೆಲಸ ಮಾಡುವವರಿಗೆ ಯಾವಾಗಲೂ ಐವರ್ನಾಡಿನ ಜನತೆಯ ಬೆಂಬಲವಿದೆ ಎಂದು ಹೇಳಿದರು.
ಸುಜನ್ ಕೆ.ಆರ್.ರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ನೂತನ ಗ್ರಾಮ ಆಡಳಿತಾಧಿಕಾರಿಯವರನ್ನು ಹೂಗುಚ್ಚ ನೀಡಿ ಸ್ವಾಗತಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸುಜನ್ ರವರು ತಾನು ಸೇವೆ ಸಲ್ಲಿಸಿದ ದಿನಗಳನ್ನು ಸ್ಮರಿಸಿಕೊಂಡು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ನೂತನ ಗ್ರಾಮ ಆಡಳಿತಾಧಿಕಾರಿ ಸುಜುರವರು ಎಲ್ಲರ ಸಹಕಾರ ಕೋರಿದರು.
ಶಿವರಾಮ ಗೌಡ ನೆಕ್ರೆಪ್ಪಾಡಿ,ಗ್ರಾಮ ಪಂಚಾಯತ್ ಪಿ.ಡಿ.ಒ ಶ್ಯಾಮ್ ಪ್ರಸಾದ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿಯವರು ಶುಭಹಾರೈಸಿ ಮಾತನಾಡಿದರು.

ವೇದಿಕೆಯಲ್ಲಿ ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಜನಾರ್ಧನ ಗೌಡ ಎಡಮಲೆ, ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ ಉಪಸ್ಥಿತರಿದ್ದರು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ಸ್ವಾಗತಿಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ವಂದಿಸಿದರು.
ಅಜಿತ್ ನಿಡುಬೆ ಕಾರ್ಯಕ್ರಮ ನಿರೂಪಿಸಿದರು.










