ಮುಳ್ಯ ಅಟ್ಲೂರು : ವಿದ್ಯಾರ್ಥಿಗಳಿಗೆ ನೇಜಿ ನೆಡುವ ಕುರಿತು ಪಾಠ

0

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರು ಶಾಲೆಯ ವಿದ್ಯಾರ್ಥಿಗಳನ್ನು
ಪುತ್ತಿಲ ಗದ್ದೆ ವೀಕ್ಷಣೆಗೆ ಕರೆದುಕೊಂಡು ಹೋಗಲಾಯಿತು.

ಗದ್ದೆಯ ಮಾಲಕರಾದ ಮನಮೋಹನ್ ಪುತ್ತಿಲರವರು ಗದ್ದೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಕಮಲರವರು ನೇಜಿ ನೆಡುವ ವಿಧಾನವನ್ನು ಮತ್ತು ಪಾಡ್ದನ ಹಾಡನ್ನು ಹೇಳಿದರು. ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಶಾಲಾ ಶಿಕ್ಷಕ ವೃಂದ, ಎಸ್ಡಿಎಂಸಿ ಸದಸ್ಯರು, ಪೋಷಕರು, ಶಾಲಾ ಅಡುಗೆ ಸಿಬ್ಬಂದಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗದ್ದೆಯ ಮಾಲಕ ರಾದ ಮನಮೋಹನ ಪುತ್ತಿಲ ರವರು ಎಲ್ಲರಿಗೂ ಸಿಹಿ ತಿಂಡಿ ಯನ್ನು ಹಂಚಿದರು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು ವಂದಿಸಿದರು.