ಆ.26ರಿಂದ 28; ಕೊಡಗು ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ32ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ

0

ಕೊಡಗು ಸಂಪಾಜೆ ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ವತಿಯಿಂದ
32ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವ ಆ.26 ರಿಂದ ಆ.28 ತನಕ ಸಂಪಾಜೆಯ
ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಆ.26ರಂದು ಪೂರ್ವಾಹ್ನ 9.00ಕ್ಕೆ ಶ್ರೀ ಗೌರಿ ಗಣೇಶೋತ್ಸವ ಮೂರ್ತಿಗಳ ಪ್ರತಿಷ್ಟಾಪನೆ,
ಸಂಜೆ 5:30 ರಿಂದ ಭಜನೆ,ನೃತ್ಯ ವೈವಿಧ್ಯ ಕಾರ್ಯಕ್ರಮ, ಸಂಗೀತ ರಸಮಂಜರಿ,
ರಾತ್ರಿ 9.45 ಕ್ಕೆ ಮಾಯೆದ ತುಡರ್ ತುಳು ಭಕ್ತಿ ಪ್ರಧಾನ ನಾಟಕ ನಡೆಯಲಿದೆ.


ಪೂರ್ವಾಹ್ನ 10:00 ಗಂಟೆಯಿಂದ ಮಹಿಳೆಯರ & ಪುರುಷರ ಕೆಸರುಗದ್ದೆಯಲ್ಲಿ ಹಗ್ಗಜಗ್ಗಾಟ,ಶಾಲಾ ಮಕ್ಕಳಿಗೆ ವಿವಿಧ ಕ್ರೀಡಾ ಕಾರ್ಯಕ್ರಮ ನಡೆಯಲಿದೆ.
ಆ.27 ರಂದು ಪೂರ್ವಾಹ್ನ 11.10 ರಿಂದ ಡಾ.ಯಶೋಧ ರಾಮಚಂದ್ರ ರವರಿಂದ ಧಾರ್ಮಿಕ ಉಪನ್ಯಾಸ
ಸಂಜೆ 5.30 ರಿಂದ ಭಜನಾ ಕಾರ್ಯಕ್ರಮ,
6: 30 ರಿಂದ ಸಮಾರೋಪ ಸಮಾರಂಭ
ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8.00 ರಿಂದ ವೀಕ್ಷಿತ್ ಗೌಡ ಕುತ್ಯಾಳರವರಿಂದ ಕೊಳಲು ವಾದನ,ರಾತ್ರಿ 9.30 ರಿಂದ ಸಂಪಾಜೆ ಯುವ ಕಲಾವಿದರಿಂದ ಮದಿಮೆನ್ ಬರೋಡು ಹಾಸ್ಯಮಯ ನಾಟಕ ನಡೆಯಲಿದೆ.


ಆ.28ರಂದು
ಪೂರ್ವಾಹ್ನ 10:00 ರಿಂದ ಸಾರ್ವಜನಿಕ ರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
12.30 ರಿಂದ ಬಹುಮಾನ ವಿತರಣೆ ಕಾರ್ಯಕ್ರಮ,ಅಪರಾಹ್ನ 2.00 ಗಂಟೆಯಿಂದ ಶ್ರೀ ಗೌರಿ ಗಣೇಶೋತ್ಸವ ದ ಶೋಭಯಾತ್ರೆಯೊಂದಿಗೆ ಚೌಕಿಯ ಸಂಗಮದಲ್ಲಿ ಜಲಾವೃತಗೊಳ್ಳಲಿದೆ.