ಸುಳ್ಯ ವೆಂಕಟರಮಣ ಸೊಸೈಟಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

0

ಸುಳ್ಯ‌ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಹಾಸಭೆಯು ಸೆ.14ರಂದು ನಡೆಯಲಿದ್ದು, ಈ ಸಂದರ್ಭ ಸಂಘದ ಸದಸ್ಯರ‌ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತಿದ್ದು ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.

2024-25ನೇ ಸಾಲಿನಲ್ಲಿ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು. ಸೆ.5 ರ ಮೊದಲು ಸಂಘದ ಸುಳ್ಯ ಪ್ರಧಾನ ಕಚೇರಿಗೆ ಹಾಗೂ ಆಯಾ ಶಾಖೆಗಳಲ್ಲಿ ತಮ್ಮ ಅಂಕ ಪಟ್ಟಿಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಸಿ.ಸದಾನಂದ ಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.