ಸುಳ್ಯದಲ್ಲಿ ಸಂಚರಿಸಿದ ಬೃಹತ್ ಮಿಲಾದ್ ಜಾಥ
ಪ್ರವಾದೀ ಸಂದೇಶ ಸರಳ ಮತ್ತು ಸೌಹಾರ್ದ ಜೀವನಕ್ಕೆ ಮಾದರಿ: ಶರೀಫ್ ಜಟ್ಟಿಪಳ್ಳ
ಹಯಾತುಲ್ ಇಸ್ಲಾಂ ಕಮಿಟಿ ಜಟ್ಟಿಪಳ್ಳ ಬುಸ್ತಾನುಲ್ ಉಲೂಂ ಮದ್ರಸ ಇದರ ವತಿಯಿಂದ ಪ್ರವಾದೀ ಮುಹಮ್ಮದ್ ಪೈಗಂಬರ್ ರವರ 1500ನೇ ಜನ್ಮದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಸ್ಥಳೀಯ ಮದ್ರಸದ ನೂರರಷ್ಟು ವಿದ್ಯಾರ್ಥಿಗಳು ಹಲವು ಭಾಷೆಗಳಲ್ಲಿ ವೈವಿಧ್ಯ ಮೀಲಾದ್ ಮೀಮ್ ಸಾಂಸ್ಕೃತಿಕ ಕಲರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.
ಇಶಾರ ಮತ್ತು ಬಿಶಾರ ಎಂಬೆರಡು ಟೀಂ ಗಳ ಮಧ್ಯೆ ಕುತೂಹಲ ಭರಿತ ಪೈಪೋಟಿಯೊಂದಿಗೆ ನಡೆದ ಸ್ಪರ್ಧೆಯಲ್ಲಿ ಬಿಶಾರ ಪ್ರಥಮ ಸ್ಥಾನ ಪಡದು ಚಾಂಪಿಯನ್ ಟ್ರೋಫಿ ತನ್ನದಾಗಿಸಿ,ಸಮೀಪ ಸ್ಪರ್ಧಿ ಇಶಾರ ರನ್ನರ್ ಟ್ರೋಫಿ ಪಡೆದುಕೊಂಡರು.

ಮಸೀದಿಯಲ್ಲಿ ನಡೆದ ಮೌಲಿದ್ ಹಾಗೂ ಪ್ರಾರ್ಥನ ಸಂಗಮಕ್ಕೆ ಅಸ್ಸೆಯ್ಯಿದ್ ಕುಂಞ್ಞಿಕೋಯ ತಂಙಳ್ ಸುಳ್ಯ ನೇತೃತ್ವ ವಹಿಸಿದರು.ಆ ಬಳಿಕದ ಮೀಲಾದ್ ಸಂಗಮದ ಅಧ್ಯಕ್ಷತೆಯನ್ನು ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಬಿ ಎ ವಹಿಸಿದರು.
ಗಾಂಧಿನಗರ ಜಮಾಅತ್ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಸೂಡಾ ಅಧ್ಯಕ್ಷ ಹಾಜಿ ಮುಸ್ತಫ ಕೆ ಎಂ ,ಸ್ಥಳೀಯ ಸದರ್ ಮುಅಲ್ಲಿಂ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಮೀಲಾದ್ ಸಂದೇಶ ನೀಡಿ ಪ್ರವಾದಿಯವರ ಜೀವನ ಶೈಲಿಯನ್ನು ನಾವು ಮೈಗೂಡಿಸಿಕೊಂಡು ಜೀವನ ನಡೆಸಿದರೇ ಖಂಡಿತವಾಗಿ ಯಶಸ್ಸು ಕಾಣಲು ಸಾಧ್ಯವಾಗುವುದು ಎಂದರು.
ಹಯಾತುಲ್ ಇಸ್ಲಾಂ ಕಮಿಟಿ ಪರವಾಗಿ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಮಾತನಾಡಿ ಸಮಾಜದ ಸರ್ವರನ್ನೂ ಸರಿ ಸಮಾನವಾಗಿ ಪ್ರೀತಿಸಿ ಮೇಲು ಕೀಲು ಎಂಬ ಭಾವನೆಯನ್ನು ಹೋಗಲಾಡಿಸಿದ ಮಹಾನ್ ಮಾನವತಾವಾದಿ ಪ್ರವಾದಿ ಮಹಮ್ಮದ್ ನಬಿಯವರು ತೋರಿಸಿಕೊಟ್ಟ ಸೌಹಾರ್ದಯುತ ಜೀವನ ಮನುಕುಲಕ್ಕೆ ಮಾದರಿಯೆಂದರು.
ಜಟ್ಟಿಪಳ್ಳ ಮಸೀದಿ ಮತ್ತು ಮದರಸ ಅಭಿವೃದ್ಧಿಗೆ ಕೈಜೊಡಿಸಲು ಈ ಸಂದರ್ಭದಲ್ಲಿ ಕರೆ ನೀಡಿದರು.















ಮೀಲಾದ್ ಕಾರ್ಯಕ್ರಮದ ಉಸ್ತುವಾರಿ ಸಮಿತಿ ಕೋಶಾಧಿಕಾರಿ ಎನ್ ಎ ಅಬ್ದುಲ್ಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಟ್ರೋಪಿ ಮತ್ತು ಬಹುಮಾನ ನೀಡದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲ ಹಾಜಿ ಕಟ್ಟೆಕ್ಕಾರ್ಸ್,ಗ್ಯಾರೆಂಟಿ ಯೋಜನೆ ಸುಳ್ಯ ತಾಲೂಕು ಅಧ್ಯಕ್ಷ ಶಾಫಿ ಕುತ್ತಮೊಟ್ಟೆ,ನಗರ ಪಂಚಾಯತ್ ಸದಸ್ಯ ಉಮ್ಮರ್ ಕೆ ಎಸ್,ಶರೀಫ್ ಕಂಠಿ,ಸಿದ್ದೀಕ್ ಕೊಕ್ಕೊ, ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಜಟ್ಟಿಪಳ್ಳ ಕಮಿಟಿ ಗೌರವಾಧ್ಯಕ್ಷ ಅಬೂಬಕ್ಕರ್ ಕೆ ಎ,ಮಾಜಿ ಅಧ್ಯಕ್ಷರುಗಳಾದ ಕೆ ಎಂ ಮೂಸಾ,ವಿ ಕೆ ಅಬೂಬಕ್ಕರ್ ಹಾಜಿ,ಬಶೀರ್ ಕ್ವಾಲಿಟಿ,ಬಶೀರ್ ಬಾಳಮಕ್ಕಿ,ಹಾಜಿ ಅಬ್ದುಲ್ ರಹಿಮಾನ್ ಸೂಪರ್ ಸ್ಟಾರ್,ಹಾಜಿ ಮಹಮ್ಮದ್ ಎಸ್ ಎ ಎಸ್,ಹಾಜಿ ಮಹಮ್ಮದ್ ಎ ಎಂ, ಯೂನುಸ್ ಸುಲ್ತಾನ್,ಬಶೀರ್ ಗೂನಡ್ಕ,ಅಶ್ರಫ್ ಇಂದ್ರಾಜೆ,ರಶೀದ್ ವಿ ಕೆ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧಂರ್ಭ ಮದ್ರಸದ ಅಧ್ಯಾಪಕರ ಉಪಯೋಗಕ್ಕಾಗಿ ಊರಿನ ಮಹಿಳೆಯರಿಂದ ಕೊಡುಗೆ ನೀಡಿದ ವಾಶಿಂಗ್ ಮಿಷನ್ ಹಸ್ತಾಂತರ ಮಾಡಿದರು.
ಪ್ರಗತಿ ಅಂಬ್ಯುಲೇನ್ಸ್ ಅಚ್ಚು ಪ್ರಗತಿ ಮತ್ತು ಮನೆಯವರು ಕೊಡುಗೆಯಾಗಿ ನೀಡಿದ ಕರೆಂಟ್ ಗೀಸರನ್ನು ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿ ಮದರಸ ಉಸ್ತುವಾರಿ ರಶೀದ್ ಜಟ್ಟಿಪಳ್ಳ,ಜಲಾಲಿಯ್ಯ ಉಸ್ತುವಾರಿ ತಾಜುದ್ದೀನ್ ಎಂ ಎಸ್,ಕಾರ್ಯದರ್ಶಿ ಅಸೀರ್ ಕಾರ್ಯಕ್ರಮ ನಿರೂಪಿಸಿದರು.
ಅಬ್ದುಲ್ ರಹಿಮಾನ್ ಜೆ.ಎ,ನಾಸೀರ್ ಸಿ ಎ,ಶಿಹಾಬ್ ಷಾ,ಶಿಹಾಬ್ ಜೆ.ಎ,ಇಮ್ರಾನ್ ಅಮೈ,ಅಬ್ದುಲ್ ರಜಾಕ್ ಕೆ ಎಂ, ಪವಾಜ್ ಎನ್ ಎ, ಮುಝಮಿಲ್,ಕಾರ್ಮಿಕ ಇಲಾಖೆಯ ಉದ್ಯೋಗಿ ಕಾದರ್ ಕೆ ಎ,ಉನೈಸ್ ಕಲ್ಲುಗುಂಡಿ,ಇಚೂ,ರಿಪಾಯಿ ವೆಜ್, ಸುಲೈಮಾನ್ ಡಿಸ್ಕೋ,ರಂಶಾದ್ ವಿ ಕೆ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಜಟ್ಟಿಪಳ್ಳ ಜಮಾಯತರು ಹಾಗೂ ಊರ ಪರವೂರ ಹಿತೈಷಿಗಳು ಭಾಗವಹಿಸಿದರು.
.ಅಧ್ಯಾಪಕ ಸಿರಾಜ್ ಸಅದಿ ಅಲೆಕ್ಕಾಡಿ ವಂದಿಸಿದರು.
ಆಕರ್ಷಕ ಮಿಲಾದ್ ಜಾಥ ಹಾಗೂ ಜಾಥದದೂಕ್ಕೂ ಸಿಹಿತಿಂಡಿ ವಿತರಣೆ
ಪ್ರವಾದಿ ಸಂದೇಶದೊಂದಿಗೆ ಜಟ್ಟಿಪಳ್ಳ ಮಸೀದಿ ಬಳಿಯಿಂದ ಅರಂಭಗೊಂಡ ಮಿಲಾದ್ ಜಾಥವು ಸುಳ್ಯ ಶ್ರೀರಾಂಪೇಟೆ ಮೂಲಕ ಸಾಗಿ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿಯವರೆಗೆ ತೆರಳಿ ಗಾಂಧಿನಗರ ಮಸೀದಿ ಮುಂಬಾಗದ ಮೂಲಕ ನಾವೂರು ಅನ್ಸಾರಿಯಾ ಜಟ್ಟಿಪಳ್ಳ ರಸ್ತೆ ಮೂಲಕ ಸಾಗಿ ಬೊಳಿಯಮಜಲು ರಸ್ತೆ ಮೂಲಕ ಜಟ್ಟಿಪಳ್ಳ ಮಸೀದಿ ವರೆಗೆ ತೆರಳಿ ಸಮಾಪ್ತಿ ಗೊಂಡಿತು.
ಜಾಥದಲ್ಲಿ ಸಾರ್ವಜನಿಕರಿಗೆ ಸಿಹಿತಿಂಡಿ ವಿತರಿಸಲಾಯಿತು.
ಜಾಥದಲ್ಲಿ ವಿಶೇಷ ಆಕರ್ಷಣೆಯಾಗಿ ಬಿ ಕೆ ಹಮೀದ್,ಕಿಲ್ಲೋರ್,ತಾಜುದ್ದೀನ್ ಎಂ ಎಸ್,ರಶೀದ್ ವಿ ಕೆ ನೇತ್ರತ್ವದಲ್ಲಿ ಜಟ್ಟಿಪಳ್ಳ ಯುವಕರು ನಿರ್ಮಿಸಿದ ಮೀನುಗಾರ ಬೋಟ್ ತಯಾರಿಸಿ ಅದನ್ನು ಅಲಂಕರಿಸಿ ಜಾಥದಲ್ಲಿ ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಪುಟಾಣಿ ಮಕ್ಕಳಿಂದ ಧಪ್ ಪ್ರದರ್ಶನ ನೀಡಿದರು
ಜಾಥದಲ್ಲಿ ಅಲ್ಲಲಿ ವಿವಿಧ ಸಂಘ ಸಂಸ್ಥೆಗಳಿಂದ ಪಾನಿಯ ಮತ್ತು ತಿಂಡಿ ತಿನಿಸುಗಳನ್ನು ವಿತರಿಸಲಾಯಿತು.
ಜಾಥದಲ್ಲಿ ಹಯಾತುಲ್ ಇಸ್ಲಾಂ ಕಮಿಟಿ ಸದಸ್ಯರು ಜಟ್ಟಿಪಳ್ಳ ಮಹಲ್ ನಿವಾಸಿಗಳು,ಉಸ್ತಾದರು ಭಾಗವಹಿಸಿದರು.










