ನಾರ್ಣಕಜೆಯಲ್ಲಿ ಸಾರಿಗೆ ಗೊಂಡೆ ಹಾಕುವುದು, ಕಿವಿಯೋಲೆ ತಯಾರಿ, ಕೈ ಬಳೆ ತಯಾರಿಸುವ ತರಬೇತಿ ಸಮಾರೋಪ

0

ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠನ ಮಂಗಳೂರು, ವಿಜಯ ಗ್ರಾಮಾಭಿವೃದ್ಧಿ ಸಮಿತಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಹಾಗೂ ಗ್ರಾಮದ ಎಲ್ಲಾ ಮಹಿಳಾ ಸಂಘಟನೆಗಳ ಸಹಯೋಗದೊಂದಿಗೆ ಸ್ಸಾರಿಗೆ ಗೊಂಡೆ ಹಾಕುವುದು, ಕಿವಿಯೋಲೆ ತಯಾರಿ, ಕೈ ಬಳೆ ತಯಾರಿಸುವ ಬಗ್ಗೆ ಉಚಿತ ತರಬೇತಿಯ ಸಮಾರೋಪ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆಯಿತು.

ಇಪ್ಪತ್ತೆರಡು ಮಂದಿ ಮಹಿಳೆಯರು ಮತ್ತು ಯುವತಿಯರು, ಮಕ್ಕಳು ತರಬೇತಿಯ ಪ್ರಯೋಜನ ಪಡೆದುಕೊಂಡರು.

ಸಮಾರೋಪದಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಭಾಗವಹಿಸಿ ಎರಡು ದಿನ ತರಬೇತಿ ನೀಡಿದ ಶ್ರೀಮತಿ ರಾಜೇಶ್ವರಿ ಶುಭಕರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನೆಲ್ಲೂರು ಕೆಮ್ರಾಜೆ ಮತ್ತು ಮರ್ಕಂಜ ವಿಜಯ ಗ್ರಾಮಭಿವೃದ್ಧಿ ಸಮಿತಿ ಅಧ್ಯಕ್ಷ ದಯಾನಂದ ಕೊರತ್ತೋಡಿ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಸದಸ್ಯರಾದ ವೇಣುಗೋಪಾಲ ತುಂಬೆತಡ್ಕ, ಶೀಲಾವತಿ ಬೊಳ್ಳಜೆ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷರು ಜಯಂತ ಚಾಕೋಟೆಮೂಲೆ ಉಪಸ್ಥಿತರಿದ್ದರು.