














ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಎಲಿಮಲೆ ಇಲ್ಲಿಯ ಮುಖ್ಯಗುರುಗಳಾದ ಶ್ರೀಧರ ಗೌಡ ಕೆರೆಮೂಲೆ ಇವರಿಗೆ ಶಿಕ್ಷಕರ ದಿನಾಚರಣೆಯಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಹಿನ್ನೆಲೆಯಲ್ಲಿ ಮಿತ್ರ ಬಳಗ ಎಲಿಮಲೆ ಇದರ ವತಿಯಿಂದ ಅವರ ನಿವಾಸಕ್ಕೆ ತೆರಳಿ ಶ್ರೀಧರ ಗೌಡ ಕೆರೆಮೂಲೆ ದಂಪತಿಗಳನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷರಾದ ಕುಲದೀಪ್ ಹರ್ಲಡ್ಕ, ನಿಕಟಪೂರ್ವ ಅಧ್ಯಕ್ಷರಾದ ಹರಿಪ್ರಸಾದ್ ಎಲಿಮಲೆ, ಉದಯ ಚಳ್ಳ, ಸುನಿಲ್ ಸುಳ್ಳಿ, ತಾರಾನಾಥ ಅಡಿಗೈ, ಸದಸ್ಯರುಗಳಾದ ವೆಂಕಟ್ ಕಲ್ಲುಪಣೆ, ತೀರ್ಥೇಶ್ವರ ಗುಡ್ಡನಮನೆ, ಪ್ರಸನ್ನ ಎಸ್ ಎನ್, ವಿಕ್ರಾಂತ್ ಚಳ್ಳ, ಹರಿಶ್ಚಂದ್ರ ಚಳ್ಳ ಉಪಸ್ಥಿತರಿದ್ದರು.










