ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದ. ಕ. ಮತ್ತು ಉಡುಪಿ ರಿ. ಇದರ ಸುಳ್ಯ ವಲಯದ
ವತಿಯಿಂದ ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕರಾದ ಕಲಾವತಿ ಮುಳ್ಯ ಮತ್ತು ಜಯಮ್ಮ ಚೆಟ್ಟಿಮಾಡರವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಅವರ ನಿವಾಸಗಳಲ್ಲಿ ಸೆ. 5ರಂದು ನಡೆಯಿತು.















ಅಸೋಸಿಯೇಷನ್ ಅಧ್ಯಕ್ಷ ಅಧ್ಯಕ್ಷ ಶಶಿ ಗೌಡ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಹರೀಶ್ ರಾವ್, ಅಸೋಸಿಯೇಷನ್ ಸದಸ್ಯರಾದ ಪರಂ, ರಮೇಶ್ ಬಿ., ನವೀನ್, ಶಿವಕುಮಾರ್, ವೇಣುಗೋಪಾಲ್ ಕೋಲ್ಚಾರ್, ಶ್ರೀಮತಿ ವಸಂತಿ ಹರೀಶ್ ರಾವ್ ನಿವೃತ್ತ ಶಿಕ್ಷಕರನ್ನು ಗೌರವಿಸಿದರು.










