ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಅವಿನಾಶ್ ದೇವರುಮಜಲುರವರಿಗೆ ಕೃಷಿ ಇಲಾಖೆಯಿಂದ ಕೊಡಮಾಡುವ ತೋಟಗಾರಿಕೆ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ದೊರೆತಿದ್ದು, ಸೆ. 6ರಂದು ಎಡಮಂಗಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
ಇವರು ಕಾನೂನು ಪದವೀಧರರಾಗಿದ್ದು ಹೈನುಗಾರಿಕೆಯೊಂದಿಗೆ ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ಗೇರು, ವಿವಿಧ ತಳಿಯ ಬಾಳೆ, ತರಕಾರಿ, ಹೂವು, ಹಣ್ಣಿನ ಕೃಷಿ ಮಾಡುತ್ತಿದ್ದಾರೆ.









ಇವರು ಎಡಮಂಗಲ ಗ್ರಾಮದ ದಿ. ದಾಮೋದರ ಮತ್ತು ಶ್ರೀಮತಿ ವಾರಿಜಾ ದಾಮೋದರ ಗೌಡರ ಪುತ್ರ.
ವರದಿ : ಎ ಎಸ್ ಎಸ್










