7 ತುಳುನಾಡ ಜವನೆರ್ (ರಿ), ಬೆಂಗಳೂರು ವತಿಯಿಂದ ಸೆ. 7 ರಂದು ವಿಜಯನಗರದ ಬಂಟರ ಸಂಘದ ಆವರಣದಲ್ಲಿ ನಡೆದ “ಅಷ್ಟಮಿದ ಐಸಿರ” 2025 ರ ತುಳುವ ಸಿರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜೀವನ್ ಟಿ.ಎನ್ ಬೆಳ್ಳಾರೆ ನಿರ್ದೇಶನದ ‘ಡ್ಯಾನ್ಸ್ ಅಂಡ್ ಬೀಟ್ಸ್’ ಬೆಳ್ಳಾರೆ. ಪಂಜ, ಸುಬ್ರಹ್ಮಣ್ಯ, ಕೈಕಂಬ ನೃತ್ಯ ಶಾಖೆಗಳ ಸುಮಾರು 60 ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಅತ್ಯುತ್ತಮ ನೃತ್ಯ ಪ್ರದರ್ಶನದ ಮೂಲಕ ನೆರೆದಿದ್ದ ಸಾವಿರಾರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಸಂಘಟಕರ ಪ್ರಶಂಸೆ ಪಡೆಯಿತು.









ತಂಡದ ಕಾರ್ಯಕ್ರಮದ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ| ಮೋಹನ್ ಆಳ್ವ, ಸಿನೆಮಾ ರಂಗದ ದಿಗ್ಗಜರಾದ ಗುರುಕಿರಣ್, ವಿಜಯರಾಘವೇಂದ್ರ, ಶಿವಧ್ವಜ್, ರೂಪೇಶ್ ಶೆಟ್ಟಿ ಮತ್ತು ಕರ್ನಾಟಕ ಸರಕಾರದ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಮತ್ತು ಹಲವಾರು ಗಣ್ಯರು ವಿದ್ಯಾರ್ಥಿಗಳ ನೃತ್ಯಗಳನ್ನು ವೀಕ್ಷಿಸಿ, ನೃತ್ಯಗಳ ನಿರ್ದೇಶನದ ವೈಖರಿ ಮತ್ತು ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಸಂತೋಷಗೊಂಡರು.
ತಂಡದ ಸಹಕಲಾವಿದರು ಮತ್ತು ಪೋಷಕರು ತಂಡದ ಯಶಸ್ಸಿಗೆ ಸಹಕರಿಸಿದರು.










