ವಾರ್ಷಿಕ 118 ಕೋಟಿ ವ್ಯವಹಾರ, 40,02,524, ಲಾಭಾಂಶ, ಶೇ.9 ಡಿವಿಡೆಂಡ್ ಘೋಷಣೆ
ಸುಬ್ರಹ್ಮಣ್ಯ- ಐನೆಕಿದು ಪ್ರಾ.ಕೃ.ಪ.ಸ.ಸಂಘದ ಮಹಾಸಭೆ ಸೆ.14 ರಂದು ಎ್.ಎಸ್.ಪಿ.ಯು.ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಚ್.ಎಲ್ ವೆಂಕಟೇಶ್ ವಹಿಸಿದ್ದರು.

ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ.ಎಸ್ ಅವರು ವರದಿ ವಾಚಿಸಿ ವಾರ್ಷಿಕ 118 ವ್ಯವಹಾರ ನಡೆಸಿದ್ದು ₹ 40,02,524 ಲಾಭಾಂಶ ಬಂದಿದ್ದು ಶೇ.9 ಡಿವಿಡೆಂಡ್ ಹಂಚುವುದಾಗಿ ಸಭೆಗೆ ತಿಳಿಸಿದರು.









ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ, ನಿರ್ದೇಶಕರಾಗಿ ರವೀಂದ್ರ ಕುಮಾರ್ ರುದ್ರಪಾದ, ಜಯಪ್ರಕಾಶ್ ಕೂಜುಗೋಡು, ಮೋಹನ ದಾಸ್ ರೈ, ಮಾಧವ ಡಿ, ಶ್ರೀಮತಿ ಭಾರತಿ ದಿನೇಶ್, ಕಿರಣ್ ಪೈಲಾಜೆ, ಗಿರೀಶ್ ಆಚಾರ್ಯ ಪೈಲಾಜೆ, ಯಶೋದ ಕೃಷ್ಣ ನೂಚಿಲ ಸೋಮಶೇಖರ ಕಟ್ಟೆಮನೆ, ಶ್ರೀಮತಿ ರಮ್ಯ ಪೈಲಾಜೆ ಉಪಸ್ಥಿತರಿದ್ದರು.

ಸಂಘಕ್ಕೆ ಸಾಲ ಪಾವತಿಗಾಗಿ ಲಲಿತಾ ನೂಚಿಲ, ಪುಷ್ಪಾವತಿ ಎನ್, ಪಿಗ್ಮಿ ಖಾತೆಗೆ ಹೆಚ್ಚು ಪಾವತಿಸಿದಕ್ಕಾಗಿ ಸುಬ್ರಹ್ಮಣ್ಯ ರಾವ್, ವಿರೇಶ್, ಸ್ಮರಣಿಕೆ ನೀಡಲಾಯಿತು. ಮಾಜಿ ನಿರ್ಧೇಶಕಿ ಯಶೋದ ಕೆ.ಎನ್ , ಮಾಜಿ ನಿರ್ಧೆಶಕ ಪದ್ಮನಾಭ ಕೆದಿಲ, ಮಧುಸೂದನ್ ಕಾಪಿಕಾಡು,
ಪ್ರೆಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಪಿ.ಬಿ ಹರೀಶ್ ರೈ ಅವರನ್ನು ಗೌರವಿಸಲಾಯಿತು. ಸಂಘದ ಸದಸ್ಯರ ಸಾಧಕ ಮಕ್ಕಳಾದ ದಿಶಾ, ತೇಜಸ್, ಆಶ್ಲೇಷ್, ಕೃತಿಕಾ, ಪ್ರೀತಿಕಾ ಕೆ.ಆರ್, ಪಿಯುಷಿಲಾಲ, ಚಿನ್ಮಯಿ ಕೆ. ಎ, ಕಾರ್ತಿಕ್, ಪ್ರಸೂನ್ ಪಠೇಲ್ ಕೂಜುಗೋಡು, ಅಕ್ಷರಿ ಆರ್.ಎಸ್, ವೇದಿಕಾ ಕೆದಿಲ, ಚೇತನ ಕೆ.ಪಿ, ಆಜ್ಞಾ ಐ, ಬೆಳೆ ಸಮೀಕ್ಷೆ ನಡೆಸಿರುವ
ಪ್ರಸಾದ್ ತಂಟೆಪ್ಪಾಡಿ, ಪುರುಷೋತ್ತಮ ಪುಚ್ಚಪ್ಪಾಡಿ ಅವರನ್ನು ಗೌರವಿಸಲಾಯಿತು. ಕೃಷಿಯೇತರ ಸಾಲ ಪಾವತಿಗಾಗಿ ಪಾರ್ವತಿ, ಧರ್ಮಪಾಲ ಅವರಿಗೆ ಬಹುಮಾನ ನೀಡಲಾಯಿತು, ಕೊಕ್ಕೋ ಮಾರಾಟ ಮಾಡಿದಕ್ಜಾಗಿ ನೇಮಿರಾಜ್ ಪದೇಲ, ಹೆಚ್ಚು ಖರೀದಿಗಾಗಿ ಶಿವರಾಮ ರೈ ಬಹುಮಾನ ನೀಡಲಾಯಿತು.

ಸಭೆಯಲ್ಲಿ ಸಮಾಜಿಕ ಭದ್ರತಾ ಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಗೀತಾ ಮಾಹಿತಿ ನೀಡಿದರು.
.ಶುಭಾಸಿಣಿ, ಲತಾ ಸರ್ವೇಶ್, ಭಾರತಿ ಪ್ರಾರ್ಥಿಸಿದರು. ಅಶೋಕ್ ಮೂಲೆಮಜಲು ಸಹಕಾರ ಗೀತೆ ಹಾಡಿದರು. ವೆಂಕಟೇಶ್ ಎಚ್.ಎಲ್ ಸ್ವಾಗತಿಸಿ, ದುಗ್ಗಪ್ಪ ನಾಯ್ಕ ವಂದಿಸಿದರು.










