2024-25ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯ ರಾಜ್ಯಶಾಸ್ತ್ರ ವಿಷಯದಲ್ಲಿ 98 ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸುಬ್ರಹ್ಮಣ್ಯದ ಎಸ್ಎಸ್ಪಿಯು ಕಾಲೇಜಿ ವಿದ್ಯಾರ್ಥಿ ಪುನೀತ್ ಪಿ.ಜಿ. ಅವರನ್ನು ದ.ಕ. ಜಿಲ್ಲಾ ರಾಜ್ಯಶಾಸ್ತ್ರ ಉಪನ್ಯಾಸಕ ಸಂಘದ ವತಿಯಿಂದ ನಡೆದ ಕಾರ್ಯಾಗಾರದಲ್ಲಿ ಸನ್ಮಾನಿಸಲಾಯಿತು.










ಸುಬ್ರಹ್ಮಣ್ಯ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಶ್ರೀ ವಿ.ದಂಬೆಕೋಡಿ, ದ.ಕ. ಡಿಡಿಪಿಯು ರಾಜೇಶ್ವರಿ ಎಚ್. ಎಚ್., ಪ್ರಮುಖರಾದ ಉಮೇಶ್ ಕರ್ಕೇರ, ಜಯಾನಂದ ಸುವರ್ಣ ಈ ಸಂದರ್ಭ ಉಪಸ್ಥಿತರಿದ್ದರು. 2022 -23 ನೇ ಸಾಲಿನಲ್ಲಿ ಸಂಜನಾ 100 ಅಂಕ, 2017- 18 ರಲ್ಲಿ ಶಕುಂತಲಾ 97 ಅಂಕ, 2015 _16 ಜ್ಯೋತಿ 96 ಅಂಕ ಪಡೆದು ಎಸ್ಎಸ್ ಪಿ.ಯು ಮಕ್ಕಳು ಸಾಧನೆ ಮೆರೆದಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಶ್ರೀ ಅವರನ್ನು ಗೌರವಿಸಲಾಯಿತು.










