ಬೆಳ್ಳಾರೆಯಲ್ಲಿ ಕುಲಾಲ ಸುಧಾರಕ ಸೇವಾ ಸಂಘದ ವಾರ್ಷಿಕ ಮಹಾಸಭೆ

0

ಕುಲಾಲ ಸುಧಾರಕ ಸೇವಾ ಸಂಘ ಸುಳ್ಯ ಬೆಳ್ಳಾರೆ ಇದರ ವಾರ್ಷಿಕ ಮಹಾಸಭೆಯು ಸೆ.14 ರಂದು ಬೆಳಿಗ್ಗೆ ಬೆಳ್ಳಾರೆ ದೇವಿ ಹೈಟ್ಸ್ ನಲ್ಲಿ ಸಂಘದ ಅಧ್ಯಕ್ಷ ನಾಗೇಶ್ ಕುಲಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಧನಂಜಯ ಕುಲಾಲ್ ವರದಿ ಮಂಡಿಸಿದರು.


ಖಜಾಂಜಿ ದಿನೇಶ್ ಎಂ.ಮೊಗಪ್ಪೆ ಲೆಕ್ಕಪತ್ರ ಮಂಡಿಸಿದರು.
ವಿಶ್ವನಾಥ ಪೆಲತ್ತಮೂಲೆ ಆಯವ್ಯಯ ಪಟ್ಟಿ ಮಂಡಿಸಿದರು.
ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಕಾಯಿತು.


ಅತಿಥಿಗಳಾಗಿ ಕುಂದಾಪುರ ಸರಕಾರಿ ಕೈಗಾರಿಕಾ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಶ್ರೀಮತಿ ಪ್ರಫುಲ್ಲ ಕೆ.ಎಸ್,ಮಂಗಳೂರು ಶ್ರೀದೇವಿ ದೇವಸ್ಥಾನದ ಅಧ್ಯಕ್ಷ ಸದಾಶಿವ ಕುಲಾಲ್ ಮಂಗಳೂರು,ಸಂಘದ ಉಪಾಧ್ಯಕ್ಷೆ ಸುಮಿತ್ರ ಮಣಿಮಜಲು, ದಳಪತಿ ಗಣೇಶ್ ಕುಲಾಲ್,ನಿರ್ದೇಶಕರಾದ ಶ್ರೀಮತಿ ಲಲಿತ ನಾಗಪ್ಪ ಕುಲಾಲ್,ಪುಷ್ಪರಾಜ. ಮಜಿಗುಂಡಿ,ಸುಕುಮಾರ ಸುಬ್ರಹ್ಮಣ್ಯ,ಮಧುಕರ ನಿಡುಬೆ,ಲಕ್ಷ್ಮಣ ಮುಂಡುಗಾರು,ಹರೀಶ ಅರಂಬೂರು,ಯೋಗೀಶ ದೇವರಗುಂಡಿ ,ನಿಕಟಪೂರ್ವ ಅಧ್ಯಕ್ಷ ಶೈಲೇಶ್ ಕುಲಾಲ್ ನೆಟ್ಟಾರ್
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ನಾಗೇಶ್ ಕುಲಾಲ್ ಸ್ವಾಗತಿಸಿ,ನಿತ್ಯಶ್ರೀ ಪಂಜಿಗಾರು ಪ್ರಾರ್ಥಿಸಿ,ಕಾರ್ಯದರ್ಶಿ ಧನಂಜಯ ಕುಲಾಲ್ ವಂದಿಸಿದರು.