ಎಡಮಂಗಲ : ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ, ಸನ್ಮಾನ ಕಾರ್ಯಕ್ರಮ ಮತ್ತು ಬ್ಯಾಂಕ್ ಮಾಹಿತಿ

0

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಭಾಗ್ಯಲಕ್ಷ್ಮೀ ಸ್ತ್ರೀ ಶಕ್ತಿ ಗೊಂಚಲು ಸಮಿತಿ ಎಡಮಂಗಲ, ಗ್ರಾಮ ಪಂಚಾಯತ್ ಎಡಮಂಗಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ, ಪೋಷಣ್ ಮಾಸಾಚರಣೆ, ಆರೋಗ್ಯ ಮಾಹಿತಿ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ ಮತ್ತು ಬ್ಯಾಂಕ್ ಮಾಹಿತಿ ಕಾರ್ಯಕ್ರಮ ಸೆ. ೧೬ ರಂದು ಎಡಮಂಗಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಪಂಜ ವಲಯದ ಅಂಗನವಾಡಿ ಮೇಲ್ವಿಚಾರಕಿಯಾದ ಶ್ರೀಮತಿ ರವಿಶ್ರೀ ಕೆ. ಇವರು ಇಲಾಖೆಯಿಂದ ದೊರೆಯುವ ಸೌಲಭ್ಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಡಮಂಗಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮಣ್ಣ ಗೌಡ ಜಾಲ್ತಾರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ತ್ರೀ ಶಕ್ತಿ ಸಂಘದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪಂಚಾಯತ್ ಕಾರ್ಯದರ್ಶಿಯಾದ ಗುರುವ ಕೆ. ಇವರು ಸಭೆಯನ್ನುದ್ದೇಶಿಸಿ ಮಾತನಾಡಿದರು.


ಕಿರಿಯ ಆರೋಗ್ಯ ಕಾರ್ಯಕರ್ತೆಯಾದ ಚಂದ್ರಾವತಿ ಸಿ. ಇವರು ದಿನನಿತ್ಯ ಅಡುಗೆಯಲ್ಲಿ ಬಳಸುವ ಆಹಾರ ವಸ್ತುಗಳ ಬಗ್ಗೆ ಮತ್ತು ಸಮತೋಲನ ಆಹಾರ, ಶುಚಿತ್ವದ ಕುರಿತು ಮಾಹಿತಿ ನೀಡಿದರು. ಶ್ರೀಮತಿ ಮೋಹಿನಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಎಡಮಂಗಲ ಇವರನ್ನು ಸನ್ಮಾನಿಸಲಾಯಿತು ಮತ್ತು ಅಂಗನವಾಡಿ LKG, UKG ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಯಿತು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಪುತ್ತೂರು ಇದರ ಸಹಯೋಜಕರಾದ ಶ್ರೀಮತಿ ಗೀತಾ ಇವರು ಬ್ಯಾಂಕಿನಿಂದ ದೊರೆಯುವ ವಿಮಾ ಸೌಲಭ್ಯಗಳು ಮತ್ತು ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ತಾರನಾಥ ಮುಪ್ಪೇರ್ಯ ವಿವೇಕ ಜಾಗ್ರತ ಬಳಗ, ಎಣ್ಮೂರು ಇವರು ರಕ್ತದಾನದ ಕುರಿತು ಮಾಹಿತಿ ನೀಡಿದರು.

ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ತಯಾರಿಸಿದ ವಿವಿಧ ಪೌಷ್ಟಿಕ ಆಹಾರಗಳ ೫೦ಕ್ಕಿಂತಲೂ ಹೆಚ್ಚು ಆಹಾರದ ಪ್ರದರ್ಶನ ನಡೆಯಿತು. ಮತ್ತು ಆರೋಗ್ಯ ಇಲಾಖಾ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಯಿತು. ಗೊಂಚಲು ಅಧ್ಯಕ್ಷರಾದ ಸೌಮ್ಯ ಪುಳಿಕುಕ್ಕು, ಕಾರ್ಯದರ್ಶಿ ಮೀನಾಕ್ಷಿ ಮರ್ದೂರಡ್ಕ ಉಪಸ್ಥಿತರಿದ್ದರು.
ಮೀನಾಕ್ಷಿ ಮರ್ದೂರಡ್ಕ ಸ್ವಾಗತಿಸಿದರು. ಶ್ರೀಮತಿ ತಾರ ಕಲ್ಲರ್ಪೆ ವಂದಿಸಿ, ಶ್ರೀಮತಿ ವನಿತ ಪುಳಿಕುಕ್ಕು ಸಹಕರಿಸಿದರು. ಶ್ರೀಮತಿ ಆಶಾದೀಪ ಎಡಮಂಗಲ ಕಾರ್ಯಕ್ರಮವನ್ನು ನಿರೂಪಿಸಿದರು. ಎಡಮಂಗಲ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಎಂ ಬಿ ಕೆ ಹಾಗೂ ಸ್ತ್ರೀ ಶಕ್ತಿ ಸಂಘದ ಸದಸ್ಯರು ಸಹಕರಿಸಿದರು.
ವರದಿ : ಎ ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ