ಆಯುರ್ವೇದ ದಿನಾಚರಣೆಯ ಅಂಗವಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ
ಪಯಸ್ವಿನಿ ಪ್ರೌಢಶಾಲೆ ಜಾಲ್ಸೂರಿನಲ್ಲಿ ಆಯುರ್ವೇದ ದಲ್ಲಿ ಆರೋಗ್ಯ, ಆಹಾರ ಪದ್ಧತಿ ಹಾಗೂ ಯೋಗದ ಮಹತ್ವದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಕೆವಿಜಿ ಆಯುರ್ವೇದ ಕಾಲೇಜಿನ ರಷಶಾಸ್ತ್ರ ಭೈಷಜ್ಯ ಕಲ್ಪನಾ ವಿಭಾಗದ ಪ್ರೊಫೆಸರ್ ಡಾ. ಹರ್ಷಿತ ಎಂ. ಸೆ. 19 ರಂದು ನಡೆಸಿಕೊಟ್ಟರು.
















ವಿದ್ಯಾರ್ಥಿಗಳಾದ ಪ್ರಸನ್ನ ಬಿ.ಎಸ್., ವೈಷ್ಣವಿ ಹಾಗೂ ಶಾಂಭವಿಯವರು ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿದರು. ಕಾರ್ಯಕ್ರಮದ
ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಜಯಲತ ಕೆ ಆರ್ ಉಪಸ್ಥಿತರಿದ್ದರು.
ಶ್ರೀಮತಿ ಸವಿತಕುಮಾರಿ ಸ್ವಾಗತಿಸಿ, ಶಿವಪ್ರಸಾದ್ ವಂದಿಸಿದರು.
ಶಿವಪ್ರಕಾಶ ಕೆ.ರವರು ಕಾರ್ಯಕ್ರಮ ನಿರೂಪಿಸಿದರು.










