














ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024- 25 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 20ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಅನಂತ ಎನ್. ಸಿ. ಅಧ್ಯಕ್ಷತೆ ವಹಿಸಿದ್ದರು. ಪ್ರಸಕ್ತ ವರ್ಷ ಒಟ್ಟು ರೂ. 48,79,99,890.60 ವ್ಯವಹಾರ ನಡೆಸಿದ್ದು, ರೂ. 38,58,626.28 ನಿವ್ವಳ ಲಾಭ ಗಳಿಸಿದೆ. ಶೇ. 9 ಡಿವಿಡೆಂಟ್ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.


ಸಂಘದ ಅಧ್ಯಕ್ಷ ಎನ್ ಸಿ ಅನಂತ ರವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ ರವರು ವರದಿ ವಾಚಿಸಿದರು.

ವಾಣಿ ಜಗದೀಶ್ ಹಾಗೂ ಪ್ರಿಯಾಂಕಾ ರವರು ಪ್ರಾರ್ಥನೆಗೈದರು. ವಸಂತ ದೇವರಗುಂಡ ವಂದಿಸಿದರು.











