ಚಂದ್ರಕಾಂತ್ ಕಲ್ಲೂರಾಯ ಹೃದಯಾಘಾತದಿಂದ ನಿಧನ

0

ಗುತ್ತಿಗಾರು ಸಮೀಪದ ವಳಲಂಬೆಯ ಚಂದ್ರಕಾಂತ್ ಕಲ್ಲೂರಾಯ ನಿನ್ನೆ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 51 ವರ್ಷ ವಯಸ್ಸಾಗಿತ್ತು.


ಚಂದ್ರಕಾಂತ್ ಕಲ್ಲೂರಾಯ ಹಾಗೂ ಪತ್ನಿ ರಾಧಿಕಾ ಕಲ್ಲೂರಾಯ ದಂಪತಿ ಹೆಚ್ಚಾಗಿ ಬೆಂಗಳೂರಿನಲ್ಲಿ ವಾಸ್ತವ್ಯದಲ್ಲಿದ್ದರು. ಆಗಾಗ ಊರಿಗೆ ಬಂದು ಹೋಗುತ್ತಿದ್ದರು. ನವರಾತ್ರಿ ಪೂಜೆಯ ಹಿನ್ನಲೆಯಲ್ಲಿ ಕಳೆದ ವಾರ ಚಂದ್ರಕಾಂತರು ಊರಿಗೆ ಬಂದಿದ್ದು, ಪತ್ನಿ ಮತ್ತು ಮಗಳು ಬೆಂಗಳೂರಿನಲ್ಲಿಯೇ ಇದ್ದರು.


ನಿನ್ನೆ ರಾತ್ರಿ ಊಟ ಮಾಡಿ 11.30 ರ ವೇಳೆಗೆ ಮಲಗಿದ್ದ ಅವರು ಇಂದು ಎದ್ದೇಳದಿದ್ದಾಗ ಮನೆಯಲ್ಲಿದ್ದವರು ನೋಡಿದಾಗ ಮೃತಪಟ್ಟಿರುವುದು ತಿಳಿದು ಬಂತು.
ಮೃತ ಚಂದ್ರಕಾಂತ್‌ರವರು ನೃತ್ಯ ವಿದುಷಿಯಾಗಿರುವ ಪತ್ನಿ ರಾಧಿಕಾ ಕಲ್ಲೂರಾಯ, ಪುತ್ರಿ ವರ್ಷಿಣಿ ಅವರನ್ನು ಅಗಲಿದ್ದಾರೆ.