ಸುದ್ದಿ ಸಮೂಹ ಸಂಸ್ಥೆಯಲ್ಲಿ ಆಯುಧ ಪೂಜೆ

0

ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ಚಾನೆಲ್, ಸುದ್ದಿ ವೆಬ್ಸೈಟ್ ಸೇರಿದಂತೆ ಸುದ್ದಿ ಸಮೂಹ ಸಂಸ್ಥೆಗಳಲ್ಲಿ ಆಯುಧ ಪೂಜೆ ಸೆ. 30ರಂದು ಸಂಜೆ ಅರ್ಚಕ ಗಣೇಶ್ ಭಟ್ ಮೂರೂರುರವರ ನೇತೃತ್ವದಲ್ಲಿ ನಡೆಯಿತು.

ಆರಂಭದಲ್ಲಿ ಸುದ್ದಿ ಬಿಡುಗಡೆಯ ಹಿರಿಯ ವರದಿಗಾರ ಶಿವಪ್ರಸಾದ್ ಆಲೆಟ್ಟಿಯವರ ನೇತೃತ್ವದಲ್ಲಿ ಸುದ್ದಿ ಬಳಗದ ಸದಸ್ಯರು ಭಜನಾ ಸೇವೆ ನಡೆಸಿದರು.

ಬಳಿಕ ಕಚೇರಿಯ ಕಂಪ್ಯೂಟರ್, ಕ್ಯಾಮರಾಗಳಿಗೆ, ವಾಹನಗಳಿಗೆ ಆಯುಧ ಪೂಜೆ ನಡೆದ ನಂತರ ಮಹಾಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಶ್ರೀಮತಿ ಶೋಭಾ ಶಿವಾನಂದ, ಪುತ್ತೂರು ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಸುಳ್ಯ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್, ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ,
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ,
ಸುದ್ದಿ ಪ್ರಕಾಶಕ ಕುಶಾಂತ್ ಕೊರತ್ಯಡ್ಕ, ಪ್ರಸರಣಾಧಿಕಾರಿ ಗಣೇಶ್ ಕುಕ್ಕುದಡಿ, ಕಂಪ್ಯೂಟರ್ ವಿಭಾಗ ಮುಖ್ಯಸ್ಥ ಶ್ರೀಧರ್ ಕಜೆಗದ್ದೆ, ಜಾಹೀರಾತು ವಿಭಾಗ ಮುಖ್ಯಸ್ಥ ರಮೇಶ ನೀರಬಿದಿರೆ, ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಸುದ್ದಿ ಚಾನೆಲ್ ಟೆಕ್ನಿಕಲ್ ವಿಭಾಗ ಮುಖ್ಯಸ್ಥ ಶ್ರೀಧಾಮ ಅಡ್ಕಾರು ಸೇರಿದಂತೆ ಸುದ್ದಿ ಬಳಗದ ಸದಸ್ಯರು ಉಪಸ್ಥಿತರಿದ್ದರು.