ಕಟ್ಟಡದ ಶಾಶ್ವತ ಚಪ್ಪರ ನಿರ್ಮಾಣ ಕಾರ್ಯ ಸಂಪೂರ್ಣ
ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ
ಮಾಸಿಕ ಸಭೆಯು ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ಅ. 5 ರಂದು ನಡೆಯಿತು.















ಸಂಘದ ಕಟ್ಟಡದ ಮುಂಭಾ ಗದಲ್ಲಿ ಶಾಶ್ವತ ಚಪ್ಪರದ ಕೆಲಸ ಪೂರ್ಣಗೊಂಡ ಹಿನ್ನಲೆಯಲ್ಲಿ ಕಲ್ಕುಡ ದೈವಸ್ಥಾನದಲ್ಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ
ಉಪಾಧ್ಯಕ್ಷ ಧನಂಜಯ ಗುತ್ತಿಗಾರು,ಮಾಜಿ ಅಧ್ಯಕ್ಷರುಗಳಾದ ಜನಾರ್ಧನ ದೋಳ, ಗೋಪಾಲ್ ಎಸ್ ನಡುಬೈಲ್, ಡಿ. ಶಾಂತಪ್ಪ ಜಯನಗರ,ಪದಾಧಿಕಾರಿಗಳಾದ ಕಮಲಾಕ್ಷ ಕಲ್ಲುಗುಂಡಿ, ರಮೇಶ್ ಶೆಟ್ಟಿ ಭಗವತಿ, ಭವಾನಿಶಂಕರ ಕಾವೇರಿ, ಬಾಲಕೃಷ್ಣ,ಹಿರಿಯ ಸದಸ್ಯರಾದ ಐಡಿಯಲ್ ಭಾಸ್ಕರಗೌಡ, ಸದಸ್ಯರಾದ ರಘುರಾಮ ಜಟ್ಟಿಪಳ್ಳ, ಮಂಜುನಾಥ್,ಹರೀಶ್ ಆರಂಬೂರು, ಜಶ್ವಿಕ್ ಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಮಧುಚಂದ್ರ ಪಂಜ ವರದಿ ವಾಚಿಸಿದರು. ಜೆತೆ ಕಾರ್ಯದರ್ಶಿ ವಾಸುದೇವ ಜಾಲ್ಸೂರು ಸ್ವಾಗತಿಸಿದರು. ಕೋಶಾಧಿಕಾರಿ ದಿನೇಶ್ ಬಾಚೋಡಿ ಲೆಕ್ಕ ಪತ್ರ ಮಂಡಿಸಿ, ವಂದಿಸಿದರು.










