ಉಬರಡ್ಕ: ಅಮೈ ಮಡಿಯಾರು ಶಾಲೆಯಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಉದ್ಘಾಟನೆ

0

ಉಬರಡ್ಕ ಮಿತ್ತೂರು ಗ್ರಾಮದ ಅಮೈಮಾಡಿಯಾರು ಅಂಗನವಾಡಿ ಕೇಂದ್ರದಲ್ಲಿ ಅ.2 ರಂದು ICDS ಜಯಂತಿ , ಪೂರ್ವ ಪ್ರಾರ್ಥಮಿಕ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಉದ್ಘಾಟನಾ ಸಮಾರಂಭ, ಪ್ರಾಕ್ತನ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮ , ಪೋಷಣ್ ಅಭಿಯಾನ್ ಕಾರ್ಯಕ್ರಮದಡಿಯಲ್ಲಿ ಸೀಮಂತ ಮತ್ತು ಅನ್ನಪ್ರಾಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ICDS ಜಯಂತಿ ಹಾಗೂ ಪ್ರಾಕ್ತನ ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯವರಾದ ಶ್ರೀಮತಿ ಪೂರ್ಣಿಮಾ ಸುಂತೋಡು ರವರು ನೆರವೇರಿಸಿಕೊಟ್ಟರು. ಹಾಗೂ LKG & UKG ತರಗತಿಗಳ ಉದ್ಘಾಟನೆಯನ್ನು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ಪಿ ಎಸ್ ಗಂಗಾಧರ ಇವರು ಪುಸ್ತಕ ವಿತರಣೆ ಮೂಲಕ ಚಾಲನೆ ನೀಡಿದರು.


ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಶಶಿರೇಖಾ ಬಿ , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ ಪಾಲಡ್ಕ , ವಿನಾಯಕ ಮಿತ್ರ ಬಳಗದ ಅಧ್ಯಕ್ಷರಾದ ವಿದ್ಯಾದರ ಹರ್ಲಡ್ಕ , ಪ್ರಾಕ್ತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹನ್ ಸುಂತೋಡು, ಅಮೈಮಾಡಿಯಾರು ವ್ಯಾಪ್ತಿಯ ಆಶಾ ಕಾರ್ಯಕರ್ತೆ ಶ್ರೀಮತಿ ಜಯಂತಿ , ಬಾಲವಿಕಾಸ ಸಮಿತಿಯ ಸದಸ್ಯ ಓಂ ಪ್ರಕಾಶ್ ನಾರ್ಕೋಡು ಹಾಗೂ ಅಮೈಮಾಡಿಯಾರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೋಭಾ ಎನ್ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಎಲ್ಲಾ ಸದಸ್ಯರು ಸ್ತ್ರೀ ಶಕ್ತಿ ಸಂಘದವರು ಕಿಶೋರಿ ಸಂಘದವರು ಮಕ್ಕಳ ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಹಾಗೂ ಊರವರು, ಅಂಗನವಾಡಿ ಸಹಾಯಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

ಪ್ರಾಕ್ತನ ಹಿರಿಯ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಲೋಕೇಶ್ ಸುತ್ತುಕೋಟೆ, ಉಪಾಧ್ಯಕ್ಷರಾಗಿ ಮೋಹನ್ ಸುಂತೋಡು & ನಿಶ್ಮಿತಾ ಹಾಗೂ ಕಾರ್ಯದರ್ಶಿಯಾಗಿ ದೀಕ್ಷಿತ್ ಅಮೈ, ಜೊತೆಕಾರ್ಯದರ್ಶಿಯಾಗಿ ದೀಪ್ತಿ ನಾರ್ಕೋಡು, ಕೋಶಾಧಿಕಾರಿಯಾಗಿ ಭಾಗ್ಯಶ್ರೀ ಬಳ್ಳಡ್ಕ ಹಾಗೂ ಸಂಘದ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ಸ್ವಾಗತವನ್ನು ಓಂ ಪ್ರಕಾಶ್ ನಾರ್ಕೋಡು ಬಾಲವಿಕಾಸ ಸಮಿತಿ ಸದಸ್ಯರು, ಪ್ರಾಸ್ತಾವಿಕ ಹಾಗೂ ಧನ್ಯವಾದ ಸಮರ್ಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ಶೋಭಾ ಎನ್ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯೆ ಕುಮಾರಿ ತುಷಿತಾ ಕೆ. ನೆರವೇರಿಸಿಕೊಟ್ಟರು.