ಸುಳ್ಯ ಶಾರದೋತ್ಸವ ಶೋಭಾಯಾತ್ರೆ : ಪೊಲೀಸ್ ಇಲಾಖೆಯಿಂದ ಮಾರ್ಗ ಬದಲಾವಣೆ ಪ್ರಕಟಣೆ

0

ಸುಳ್ಯ ಶ್ರೀ ಶಾರದಾಂಭ ಸೇವಾ ಸಮಿತಿ ವತಿಯಿಂದ ಇಂದು ಮಧ್ಯಾಹ್ನ ೦೩:೦೦ ಗಂಟೆಯಿಂದ ಶ್ರೀ ಶಾರದಾದೇವಿ ಮೂರ್ತಿಯ ಶೋಭಯಾತ್ರೆಯು ೧೨ ಸ್ತಬ್ಧಚಿತ್ರಗಳೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನ ಬಳಿಯಿಂದ ಹೊರಟು ಕೆ ವಿಜಿ ಜಂಕ್ಷನ್ – ವಿವೇಕಾನಂದ ಸರ್ಕಲ್ – ಶ್ರೀ ರಾಮಪೇಟೆ ಜ್ಯೋತಿ ಸರ್ಕಲ್ -ಮೊಗರ್ಪಣೆ – ಹಳೇಗೇಟು ತಲುಪಿ ವಾಪಾಸ್ಸು ಶ್ರೀರಾಮಪೇಟೆ – ಕೆ.ಎಸ್.ಆರ್.ಟಿ.ಸಿ ಜಂಕ್ಷನ್ – ಗಾಂಧಿನಗರ – ವಿಷ್ಣು ಸರ್ಕಲ್ ತಲುಪಿ ಪುನಃ ವಾಪಾಸ್ಸು ಕಟ್ಟೆ ಜಂಕ್ಷನ್ – ರಥಬೀದಿ ಮಾರ್ಗವಾಗಿ ಅಜ್ಜಾವರ ಗ್ರಾಮದ ಕಾಂತಮಂಗಲ ಪಯಸ್ವಿನಿ ಹೂಳೆಯಲ್ಲಿ ವಿಸರ್ಜನೆ ನಡೆಯಲಿದ್ದು, ಈ ಸಮಯ ಸುಮಾರು ೫೦೦೦ ಜನರು ಸೇರುವ ನಿರೀಕ್ಷೆ ಇದ್ದು, ಸುಳ್ಯ ಪೇಟೆಯಲ್ಲಿ ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗಿದ್ದು, ಶೋಭಯಾತ್ರೆ ಸಮಯದಲ್ಲಿ ಸುಳ್ಯ ಪೇಟೆಯಲ್ಲಿ ವಾಹನ ದಟ್ಟಣೆ ಉಂಟಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಬದಲಿ ಮಾರ್ಗವನ್ನು ಉಪಯೋಗಿಸುವ ಅವಶ್ಯಕತೆ ಇರುತ್ತದೆ.


ಈ ನಿಟ್ಟಿನಲ್ಲಿ ಮಡಿಕೇರಿಯಿಂದ ಸುಳ್ಯ – ಪುತ್ತೂರು -ಮಂಗಳೂರಿಗೆ ತೆರಳುವ ವಾಹನಗಳು ಪರಿವಾರಕಾನ ಉಬರಡ್ಕ ಮಿತ್ತೂರು ಕಂದಡ್ಕ ಜಾಲ್ಲೂರು ಮಾರ್ಗವಾಗಿ ಪುತ್ತೂರು ಮಂಗಳೂರು ತೆರಳುವಂತೆ ಹಾಗೂ ಮಂಗಳೂರಿನಿಂದ ಸುಳ್ಯ- ಮಡಿಕೇರಿ ಮಾರ್ಗವಾಗಿ ತೆರಳುವ ವಾಹನಗಳು ಜಾಲ್ಸೂರು ಗ್ರಾಮದ ಅಡ್ಕಾರು – ಪೇರಾಲು – ಅಜ್ಜಾವರ- ಕಾಂತಮಂಗಲ – ಕಟ್ಟೆ ಜಂಕ್ಷನ್ ಮಾರ್ಗವಾಗಿ ಮಡಿಕೇರಿ ತೆರಳುವಂತೆ ದಿನಾಂಕ:೦೭.೧೦.೨೦೨೫ ರ ಮಧ್ಯಾಹ್ನ ೦೨:೦೦ ಗಂಟೆಯಿಂದ ದಿನಾಂಕ :೦೮.೧೦.೨೦೨೫ ರ ಬೆಳಿಗ್ಗೆ ೦೬:೦೦ ಗಂಟೆಯವರೆಗೆ ವಾಹನ ಸಂಚಾರದ ಬಗ್ಗೆ, ಈ ಬದಲಿ ಮಾರ್ಗವಾಗಿ ಚಲಿಸುವಂತೆ ಸೂಚನೆಯನ್ನು ನೀಡಲಾಗಿದೆ