ಹಲ್ಲಿನ ಯಾವುದೇ ಸಮಸ್ಯೆಗಳಿಗೆ ನಮ್ಮಲ್ಲಿ ಪರಿಹಾರವಿದೆ – ಡಾ. ರೇಣುಕಾಪ್ರಸಾದ್ ಕೆ.ವಿ
ಬೆಂಗಳೂರಿನಲ್ಲಿ ಸಿಗುವ ಸೌಲಭ್ಯಗಳು ಸುಳ್ಯದಲ್ಲಿ ಲಭ್ಯ – ಮೌರ್ಯ ಆರ್. ಕುರುಂಜಿ
ಯಾವುದೇ ಕಾರಣಗಳಿಗೆ ಹಲ್ಲುಗಳನ್ನು ಕಳೆದುಕೊಂಡರೆ ಒಂದೇ ದಿವಸದಲ್ಲಿ ಜೋಡಿಸಿಕೊಡಲಾಗುವುದು – ಡಾ. ಮೋಕ್ಷಾ ನಾಯಕ್

ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಹಲ್ಲಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಇದೀಗ ನೂತನವಾಗಿ ಇಂಪ್ಲಾಂಟ್ ವಿಭಾಗ ಲೋಕಾರ್ಪಣೆಗೊಂಡಿದೆ. ನಾವೆಲ್ಲಾ ಹಲ್ಲನ್ನು ಕಳೆದುಕೊಂಡಾಗ ಹಲ್ಲಿನ ಸೆಟ್‌ನ್ನು ಅಳವಡಿಸುತ್ತೇವೆ. ಆದರೆ ಇಂಪ್ಲಾಂಟ್ ಚಿಕಿತ್ಸೆಯ ಮೂಲಕ ಹಲ್ಲನ್ನು ಜೋಡಿಸುವ ವ್ಯವಸ್ಥೆ ಮಾಡಲಾಗುವುದು. ನಮ್ಮಲ್ಲಿರುವ ಸೌಲಭ್ಯಗಳು ದೂರದ ಊರಿನವರಿಗೂ ತಿಳಿಯಬೇಕು.
ಇಲ್ಲಿನ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ ಹೇಳಿದರು. ಅವರು ಅ. 7ರಂದು ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಇಂಪ್ಲಾಂಟ್ ವಿಭಾಗವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
















ಉದ್ಘಾಟನೆಗೂ ಮೊದಲು ಪತ್ರಿಕಾಗೋಷ್ಠಿ ನಡೆಯಿತು. ಕಾಲೇಜಿನ ಪೆರಿಯೋಡೋಂಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಂ. ದಯಾಕರ್ ಸ್ವಾಗತಿಸಿ, ಮಾತನಾಡುತ್ತಾ ಕಳೆದ ಹಲವಾರು ವರ್ಷಗಳಿಂದ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆ ನಮ್ಮಲ್ಲಿ ನೀಡುತ್ತಾ ಬಂದಿದ್ದೇವೆ. ಈಗ ಅದರದ್ದೇ ಒಂದು ವಿಭಾಗವನ್ನು ತೆರೆಯಲಾಗಿದೆ. ನುರಿತ ವೈದ್ಯರುಗಳು ಚಿಕಿತ್ಸೆ ನೀಡಲು ಲಭ್ಯರಿದ್ದು, ತರಬೇತಿಗಳನ್ನೂ ನಡೆಸಲಾಗುದು. ಮಂಗಳೂರು, ಬೆಂಗಳೂರಿನಂತ ಮಹಾನಗರಗಳಲ್ಲಿ ದೊರಕುವ ಚಿಕಿತ್ಸೆ ಇಲ್ಲಿ ಕನಿಷ್ಠ ದರದಲ್ಲಿ ಲಭ್ಯವಿರುವುದರಿಂದ ದೂರದ ಊರಿನಿಂದ ಹೆಲ್ತ್ ಟೂರ್ ಆಯೋಜಿಸಿ ಇಲ್ಲಿ ಬಂದು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು. ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್. ಕುರುಂಜಿ ಮಾತನಾಡಿ ಡೆಂಟಲ್ ಇಂಪ್ಲಾಂಟ್ ಚಿಕಿತ್ಸೆಗೆ ಸುಳ್ಯದಿಂದ ಬೆಂಗಳೂರಿಗೆ ಹೋಗಬೇಕಾಗಿತ್ತು. ಇನ್ನು ಬೆಂಗಳೂರಿನವರು ಸುಳ್ಯಕ್ಕೆ ಬರಬೇಕು. ನಮ್ಮಲ್ಲಿ ಅಳವಡಿಸಿರುವ ಯಾವುದೇ ಉಪಕರಣಗಳು ಉತ್ತಮ ಗುಣಮಟ್ಟದಿಂದ ಕೂಡಿರುವಂತದ್ದು. ಇದರಲ್ಲಿ ಯಾವುದೇ ರಾಜಿ ಇಲ್ಲ. ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಅನುಭವೀ ತಜ್ಞ ವೈದ್ಯರ ತಂಡ ನಮ್ಮಲ್ಲಿದೆ ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ಮಾತನಾಡಿ ಸಂಸ್ಥೆಯ ಸ್ಥಾಪನೆಗೆ ಕಾರ್ಣಕರ್ತರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರು ಹಲ್ಲಿನ ಆರೋಗ್ಯಕ್ಕೂ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದರು. ಅವರ ಕನಸ್ಸನ್ನು ಅವರ ಮೊಮ್ಮಗ ಮೌರ್ಯ ಆರ್. ಕುರುಂಜಿ ನನಸಾಗಿಸಿದ್ದಾರೆ. ಅದಕ್ಕೆ ಎಒಎಲ್ಇ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ ಮತ್ತು ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್ ಪ್ರೋತ್ಸಾಹ ನೀಡುತ್ತಿದ್ದಾರೆ. ಡೆಂಟಲ್ ಇಂಪ್ಲಾಂಟ್ ವಿಭಾಗದ ಮೂಲಕ ಇಲ್ಲಿನ ಬಿಡಿಎಸ್ ಮತ್ತು ಎಂಡಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರೊಂದಿಗೆ ಹೊರಗಿನ ಆಸಕ್ತ ವೈದ್ಯರುಗಳೂ ತರಬೇತಿ ಪಡೆಯಬಹುದು ಎಂದರು. ಡೆಂಟಲ್ ಇಂಪ್ಲಾಂಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ರಕ್ಷಿತ್ ಹೆಗ್ಡೆ, ಉಪಪ್ರಾಂಶುಪಾಲೆ ಡಾ. ಶೈಲಾ ಪೈ, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಕೃಷ್ಣ ಪ್ರಸಾದ, ಡಾ. ಸುಹಾಸ್ ರಾವ್, ಡಾ. ಜಯಪ್ರಸಾದ್ ಆನೆಕಾರ್, ಡಾ. ಪ್ರಸನ್ನ ಕುಮಾರ್, ಎಒಎಲ್ಇ ಕಮಿಟಿ ಬಿ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ಡಾ. ದೇವಿಪ್ರಸಾದ್ ನೂಜಿ, ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿಟಿ, ಕೆವಿಜಿ ಐಟಿಐ ಪ್ರಾಂಶುಪಾಲ ದಿನೇಶ್ ಮಡ್ತಿಲ ಸೇರಿದಂತೆ ಕೆವಿಜಿ ಡೆಂಟಲ್ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ವಜಿದಾ ಸ್ವಾಗತಿಸಿ, ವಂದಿಸಿದರು.
ಏನಿದು ಇಂಪ್ಲಾಂಟ್: ಮನುಷ್ಯನು ವಿವಿಧ ಕಾರಣಗಳಿಂದ ಹಲ್ಲುಗಳನ್ನು ಕಳೆದುಕೊಂಡಾದ ಕೃತಕ ಹಲ್ಲುಗಳನ್ನು ಆಧುನಿಕ ಚಿಕಿತ್ಸೆಯ ಮೂಲಕ ಜೋಡಣೆ ಮಾಡುವುದೇ ಇಂಪ್ಲಾಂಟೇಷನ್.
ಜೋಡಣೆ ಹೇಗೆ: ಹಲ್ಲುಗಳನ್ನು ಕಳೆದುಕೊಂಡ ದವಡೆಯ ಎಲುಬುಗಳ ಸಾಂದ್ರತೆ ಮತ್ತು ಲಭ್ಯತೆಗಳನ್ನು ಸಿ.ಬಿ.ಸಿ.ಟಿ ಎಂಬ ಅತ್ಯಾಧುನಿಕ ತ್ರಿಡಿ ಕ್ಷ-ಕಿರಣ ವ್ಯವಸ್ಥೆಯ ಮೂಲಕ ತಿಳಿದುಕೊಂಡು ಎಲುಬಿನ ಒಳಗೆ ಇಂಪ್ಲಾಂಟ್ ಎಂಬ ಸಾಧನವನ್ನು ಅಳವಡಿಸಿ ಕೃತಕ ಹಲ್ಲುಗಳನ್ನು ಜೋಡಿಸುವ ವ್ಯವಸ್ಥೆ.










