








ಇತ್ತೀಚೆಗೆ ನಿಧನರಾದ ಹರಿಹರ ಪಲ್ಲತ್ತಡ್ಕ ಗ್ರಾಮದ ಬೆಂಡೋಡಿ ಮನೆ, ಪ್ರಸ್ತುತ ಕುಂಬ್ರದ ಸಾರಕೆರೆ ಎಂಬಲ್ಲಿ ವಾಸ್ತವ್ಯವಿದ್ದ ದೋಳಮನೆ ನಿವೃತ್ತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಸಣ್ಣಣ್ಣ ಗೌಡರ ವೈಕುಂಠ ಸಮಾರಾಧನೆ ಹಾಗೂ ನುಡಿ ನಮನ ಕಾರ್ಯಕ್ರಮ ಇಂದು ಅವರ ಮನೆಯಲ್ಲಿ ನಡೆಯಿತು.
ಮೃತರ ಬಗ್ಗೆ ಶಿವರಾಮ ಗೌಡ ಇಡ್ಯಪೆ ಮನೆ ಇವರು ನುಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೃತರ ಪತ್ನಿ, ಶ್ರೀಮತಿ ವಸಂತಿ ಮಗ ಚರಣ್, ಸೊಸೆ ಮಗಳು ಚೇತನಾ, ಅಳಿಯ, ಮೊಮ್ಮಕ್ಕಳು, ಸೇರಿದಂತೆ ಕುಟುಂಬಸ್ಥರು, ಬಂಧುಗಳು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಚಿತ್ರ ವರದಿ ಡಿ.ಹೆಚ್.








