ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಬರಡ್ಕದಲ್ಲಿ ದಿಕ್ಸೂಚಿ ಫಲಕ ಮತ್ತು ಕುತ್ತಮೊಟ್ಟೆಯಲ್ಲಿ ಕಸ ಸಂಗ್ರಹಿಸುವ ತೊಟ್ಟಿ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಿತ್ತೂರು ನಾಯರ್ ಉಳ್ಳಾಕುಳು ದೈವಸ್ಥಾನದ ಮೊಕ್ತೆಸರರಾದ ವೆಂಕಟ್ರಮಣ ಕೆದಂಬಾಡಿ ನಾಮಫಲಕ ಮತ್ತು ಕಸ ತೊಟ್ಟಿಯನ್ನು ಅನಾವರಣಗೊಳಿಸಿ ಮಾತನಾಡಿ, ಶುಭ ಹಾರೈಸಿದರು.
















ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಸೂಂತೋಡು ಮಾತನಾಡಿ `ಟ್ರಸ್ಟ್ ನ ಸೇವಾ ಕಾರ್ಯ ಸಂತಸ ತಂದಿದೆ ಎಂದರು.
ಟ್ರಸ್ಟಿನ ಅಧ್ಯಕ್ಷರಾದ ರಾಹುಲ್ ನಡುಮುಟ್ಲು, ಕಾರ್ಯದರ್ಶಿ ಸಂದೀಪ್ ಮದುವೆಗದ್ದೆ, ಖಜಾಂಚಿ ಅಪ್ಪಯ್ಯ ಸೂಂತೋಡು, ಟ್ರಸ್ಟಿಗಳಾದ ಗಿರೀಶ್ ಪಾಲಡ್ಕ.
ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜೇಶ್ ಭಟ್, ಗ್ರಾಮಸ್ಥರಾದ ಜಯಂತ ಬಳ್ಳಡ್ಕ, ವಿನಯ, ರಮೇಶ್ ಪಾನತ್ತಿಲ, ದಿನೇಶ್ ಬೈತಡ್ಕ, ಶಶಿಧರ ಹುಳಿಯಡ್ಕ, ಉಬರಡ್ಕದ ರಿಕ್ಷಾ ಚಾಲಕರು ಮಾಲಕರು ಮತ್ತು ವರ್ತಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.










