ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಮೂಡಬಿದ್ರೆ ಇದರ ಆಶ್ರಯದಲ್ಲಿ ಮಂಗಳೂರು ಯೋಗಶ್ರೀ ಯೋಗ ಬಳಗದ 36 ನೇ ವರ್ಷದ ಶ್ರೀ ಶಾರದೋತ್ಸವ ಪ್ರಯುಕ್ತ
ಸೆ. 29 ರಂದು ಮೂಡಬಿದ್ರೆ ಯಲ್ಲಿ ನಡೆದ ಮುಕ್ತ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸುಳ್ಯದ ಯೋಗೇನ ಚಿತ್ತಸ್ಯಯೋಗ ಕೇಂದ್ರಕ್ಕೆ ಹಲವಾರು ಪ್ರಶಸ್ತಿಗಳು ಲಭಿಸಿದೆ.















ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ತನುಷ್ ಎಂ.ಹೆಚ್ ಪ್ರಥಮ ಸ್ಥಾನ ಹಾಗೂ ಅಂತಿಮ ಸುತ್ತಿನ ಚಾಂಪಿಯನ್ ಆಫ್ ಚಾಂಪಿಯನ್ ಸ್ಪರ್ಧೆಯಲ್ಲಿ ವೈಯಕ್ತಿಕ ಬಾಲಕರ ವಿಭಾಗದಲ್ಲಿ ಯೋಗ ವಿಶಾರದ ಬಿರುದು ಪಡೆದುಕೊಂಡಿರುತ್ತಾನೆ. ಕಿರಿಯ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಣನ್ಯ ಕುದ್ಪಾಜೆ ಪ್ರಥಮ ಸ್ಥಾನ ,ಕಿರಿಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಆಶ್ರಿತ್ ಎ.ಸಿ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀಶೌರ್ಯ ಎ.ಸಿ ದ್ವಿತೀಯ ಸ್ಥಾನ, ಹಿರಿಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀಶಾಂತ್ ಎನ್. ರೈ ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರು ಯೋಗೇನ
ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿಗಳಾಗಿದ್ದು
ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಮತ್ತು ಪ್ರಶ್ವಿಜಾ ಸಂತೋಷ್ ತರಬೇತಿ ನೀಡಿರುತ್ತಾರೆ.










