ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮದ ಮನೆ ಮನೆ ಭೇಟಿ ಜನಗಣತಿ ಸಮೀಕ್ಷೆಯ ಕುರಿತು ಸಮಾಲೋಚನಾ ಸಭೆಯು ಅಮರಮುಡ್ನೂರು ಪಂಚಾಯತ್ ನಲ್ಲಿ ಅ. 9 ರಂದು ನಡೆಯಿತು.
















ಈಗಾಗಲೇ ಗ್ರಾಮದಲ್ಲಿ ಬಾಕಿ ಇರುವಜನಗಣತಿಯ
ಸಮೀಕ್ಷೆ ವಿವರವನ್ನು ಪಿ. ಡಿ. ಒ ದಯಾನಂದ ಪತ್ತುಕುಂಜ ರವರು ನೀಡಿದರು.
ಗ್ರಾಮದಲ್ಲಿ ನೆಟ್ ವರ್ಕ್ ಸಮಸ್ಯೆ ಯಿಂದ ಕೆಲವು ಕಡೆಗಳಲ್ಲಿ ಅಪ್ ಡೇಟ್ ಮಾಡಲಾಗುತ್ತಿಲ್ಲ. ಏರಿಯವಾರು ಹಂಚಿಕೆ ಸರಿಯಾದ ರೀತಿಯಲ್ಲಿ ಮಾಡಿಕೊಡದಿರುವುದರಿಂದ ಸಂಪೂರ್ಣ ಗಣತಿ ಮುಗಿಸಲಾಗಲಿಲ್ಲ.ಕೆಲವು ಮನೆಗಳಲ್ಲಿ ಸಮರ್ಪಕ ಉತ್ತರ ನೀಡದೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸಮಸ್ಯೆಯ ಬಗ್ಗೆ ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡರು.
ಈ ಸಂದರ್ಭದಲ್ಲಿ ಗಣತಿ ತರಬೇತುದಾರ ಸುಬ್ರಹ್ಮಣ್ಯ ರವರು ನಿಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳಿಗೆ ಭೇಟಿ ನೀಡಿ
ಐ. ಡಿ ಸಂಖ್ಯೆ ಕೊಟ್ಟು ಅಪ್ ಡೇಟ್ ಮಾಡುವಂತೆ ಹಾಗೂ ವಾರ್ಡುವಾರು ಪಂಚಾಯತ್ ಸದಸ್ಯರ ಸಹಕಾರ ಪಡೆದುಕೊಳ್ಳುವಂತೆ ತಿಳಿಸಿದರು.
ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಆಡಳಿತಾ ಧಿಕಾರಿ ,ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.










