ಪಂಜದ ದೀನ್ ದಯಾಳ್ ಸಂಕೀರ್ಣದಲ್ಲಿ ಪಂಚಶ್ರೀ ಅಸೋಸಿಯೇಟ್ಸ್ ಶುಭಾರಂಭ

0

ವಾಯುಮಾಲಿನ್ಯ ತಪಾಸಣಾ ಮತ್ತು ವಾಹನ ಇನ್ಸೂರೆನ್ಸ್ ಕೇಂದ್ರ

ಪಂಜದ ದೀನ್ ದಯಾಳ್ ಸಂಕೀರ್ಣದಲ್ಲಿ ಪಂಚಶ್ರೀ ಅಸೋಸಿಯೇಟ್ಸ್ ವಾಯುಮಾಲಿನ್ಯ ತಪಾಸಣಾ ಮತ್ತು ವಾಹನ ಇನ್ಸೂರೆನ್ಸ್ ಕೇಂದ್ರ ಅ.12 ರಂದು ಶುಭಾರಂಭ ಗೊಂಡಿತು.
ಸಂಸ್ಥೆಯ ವ್ಯವಸ್ಥಾಪಕ ಶಿವಪ್ರಸಾದ್ ಕೇರ್ಪಡ-ಕಕ್ಯಾನ ರವರ ತಂದೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಬ್ಬಂದಿ ರತ್ನಾಕರ ಗೌಡ ಕೇರ್ಪಡ-ಕಕ್ಯಾನ ದೀಪ ಬೆಳಗಿಸಿ ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸ್ಟಾರ್ ಹೆಲ್ತ್ ಇನ್ಶುರೆನ್ಸ್ ಅಡ್ವೈಸರ್ ಸಂತೋಷ್ ಜಾಕೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಎಸ್ ಬಿ ಐ ಇನ್ಸೂರೆನ್ಸ್
ಅಡ್ವೈಸರ್ ಮತ್ತು ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಪಂಜ ಬಿ ಯಂ ಯಸ್ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯ, ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ದೇರಾಜೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ ಶುಭ ಹಾರೈಸಿದರು.ಸಂಸ್ಥೆಯ ವ್ಯವಸ್ಥಾಪಕ ಶಿವಪ್ರಸಾದ್ ಕೇರ್ಪಡ-ಕಕ್ಯಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ಶಿವಪ್ರಸಾದ್ ಕೇರ್ಪಡ-ಕಕ್ಯಾನ ಸ್ವಾಗತಿಸಿದರು ಮತ್ತು ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಶ್ರಾವ್ಯ ಶಿವಪ್ರಸಾದ್ ಕೇರ್ಪಡ-ಕಕ್ಯಾನ, ಶ್ರೀಮತಿ ದಮಯಂತಿ ರತ್ನಾಕರ ಗೌಡ, ಕೇರ್ಪಡ-ಕಕ್ಯಾನ. ಸಾನಿಯಾ ಕೇರ್ಪಡ-ಕಕ್ಯಾನ , ಸ್ಲಾಗನ್ ಕೇರ್ಪಡ-ಕಕ್ಯಾನ, ಅನುರಾಜ್ ಕೇರ್ಪಡ-ಕಕ್ಯಾನ, ಹರಿಶ್ಚಂದ್ರ, ಶ್ರೀಮತಿ ಚೇತನಾ ಸಹಕರಿಸಿದರು.

ನಮ್ಮಲ್ಲಿ ಎಲ್ಲಾ ವಿಧದ ವಾಹನಗಳ ವಾಯುಮಾಲಿನ್ಯ ತಪಾಸಣೆ ಮತ್ತು ಎಲ್ಲಾ ಕಂಪೆನಿಯ ಇನ್ಸೂರೆನ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.