








ಅಕ್ಟೋಬರ್ 19 ರಂದು ನಡೆದ ರನ್ ಫಾರ್ ಇಂಡಿಯಾ ಆರ್ಮಿ ಅವರು ನಡೆಸಿದ ಬೆಂಗಳೂರಿನ ಮಿಲಿಟರಿ ಕ್ಯಾಂಪಸ್ ನಲ್ಲಿ ನಡೆದ ೧೦ ಕಿ.ಮೀ ಮ್ಯಾರಥಾನ್ನಲ್ಲಿ ವಿದ್ಯಾ ಹರೀಶ್ ಪೆರಾಜೆ ಬಂಗಾರಕೋಡಿ ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇವರು ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್. ಕೂಸಪ್ಪ ಗೌಡ – ಸಣ್ಣಮ್ಮ ದಂಪತಿಯವರ ಪುತ್ರಿ. ತೊಡಿಕಾನ ಸ್ವರ್ಣ ಶ್ರೀ ಶಕ್ತಿ ಸಂಘದ ಸದಸ್ಯೆ, ಕೋಟೆ ಪೆರಾಜೆಯ ಅನ್ನಪೂರ್ಣೇಶ್ವರಿ ಭಜನಾ ಮಂಡಲದ ಸದಸ್ಯೆ, ಶ್ರೀ ಕ್ಷೇತ್ರ ಧರ್ಮಸ್ಥಳ ಆದಿಶಕ್ತಿ ಸಂಘ ಬಾಳೆಕಜೆ ಇದರ ಸದಸ್ಯೆ ಹಾಗೂ ಇವರು ಅಕ್ಷಯ ಗೊಂಚಲು ಅರಂತೋಡು ಇದರ ಸದಸ್ಯರಾಗಿದ್ದಾರೆ.










