ಏನೆಕಲ್ಲು : ಚರಂಡಿ ದುರಸ್ತಿ ವೇಳೆ ಸುರಂಗ ರೂಪದ ಬೃಹತ್ ಗುಂಡಿ ಪತ್ತೆ

0

ಸಾರ್ವಜನಿಕರಲ್ಲಿ ಮೂಡಿದ ಕುತೂಹಲ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಏನೆಕಲ್ಲು ಗ್ರಾಮದಲ್ಲಿ ಚರಂಡಿ ದುರಸ್ತಿ ಕಾಮಗಾರಿ ವೇಳೆ ಸುರಂಗ ರೂಪದ ಗುಂಡಿ ಪತ್ತೆಯಾಗಿ ಅಚ್ಚರಿಕೆಗೆ ಕಾರಣವಾಗಿದೆ. ಇಲ್ಲಿನ ಸಿ ಆರ್ ಸಿ ಕಾಲೋನಿ ಬಳಿ ಜೆಸಿಬಿ ಬಳಸಿ ಚರಂಡಿ ಕಾಮಗಾರಿ ಮಾಡಲಾಗುತ್ತಿತ್ತು. ಈ ವೇಳೆ ಭೂಮಿಯೊಳಗೆ ಬೃಹತ್ ರೂಪದಲ್ಲಿ ಗುಹೆ (ಸುರಂಗ) ಕಾಣಿಸಿಕೊಂಡಿದೆ. ಸದ್ಯ ಈ ವಿಚಾರ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿದೆ.

ದೊಡ್ಡ ಆಕಾರದಲ್ಲಿರುವ ಈ ಗುಹೆಯ ಮೇಲ್ಭಾಗದಲ್ಲಿಯೇ ರಸ್ತೆ ಹಾದು ಹೋಗುವುದರಿಂದ ಯಾವುದೇ ಕ್ಷಣದಲ್ಲಾದರೂ ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಲಘು ಹಾಗೂ ಭಾರೀ ಘನ ವಾಹನಗಳು ಸಂಚರಿಸುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯಾಡಳಿತ ಮತ್ತು ತಾಲೂಕು ಆಡಳಿತ ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.