ಸಾರ್ವಜನಿಕ ಮುಕ್ತ ಪುರುಷರ ಹಗ್ಗಜಗ್ಗಾಟ ಮತ್ತು ಸಾರ್ವಜನಿಕ ಮುಕ್ತ ಮಹಿಳೆಯರ ತ್ರೋಬಾಲ್ ಪಂದ್ಯಾಟ

ಪೆರಾಜೆ ಗ್ರಾಮದ ಬಂಟೋಡಿ ಅಗ್ನಿ ಯುವಕ ಮಂಡಲ(ರಿ.) ಇದರ ವತಿಯಿಂದ ದೀಪಾವಳಿ ಹಬ್ಬದ
ಪ್ರಯುಕ್ತ ತೃತೀಯ ವರ್ಷದ ವಾರ್ಷಿಕ ಕ್ರೀಡಾಕೂಟವು ಅ.19 ರಂದು ಪೆರಾಜೆ ಜ್ಯೋತಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಪೆರಾಜೆ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಂಪಿ ಪ್ರಸರಾಂಗ ಕನ್ನಡ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕ ಮತ್ತು ನಿರ್ದೇಶಕರಾದ ಡಾ|ಮಾಧವ ಪೆರಾಜೆ ಹಾಗೂ ಮಂಗಳೂರು ಎ.ಜೆ. ಹಾಸ್ಪಿಟಲ್ ನಲ್ಲಿ ಮೆಡಿಕಲ್ ಗ್ಯಾಸ್ಟ್ರೊಲಜಿಯ ಡಾ.ರಾಘವೇಂದ್ರ ಪ್ರಸಾದ್ ಕೆ.ವಿ. ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪ್ರಶಾಂತ್ ಕೆ. ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪೆರಾಜೆ ಜ್ಯೋತಿ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ನಿವೃತ್ತ ಪ್ರಭಾರ ಮುಖ್ಯ ಶಿಕ್ಷಕ ದೊಡ್ಡಣ್ಣ ಬರಮೇಲು ಹಾಗೂ ಜ್ಯೋತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಾಜ್ ಮುಖ್ಯ ಅತಿಥಿಗಳಾಗಿದ್ದರು.

ಬೆಳಗ್ಗೆ ಗ್ರಾಮಸ್ಥರ ರಸ್ತೆ ಓಟ ನಡೆಯಿತು. ನಂತರ 650 ಕೆ.ಜಿ. ವಿಭಾಗದ ಸಾರ್ವಜನಿಕ ಮುಕ್ತ ಪುರುಷರ ಹಗ್ಗಜಗ್ಗಾಟ ಪಂದ್ಯಾಟ ಹಾಗೂ ಸಾರ್ವಜನಿಕ ಮುಕ್ತ ಮಹಿಳೆಯರ ತ್ರೋಬಾಲ್ ಪಂದ್ಯಾಟ ಮತ್ತು ಗ್ರಾಮಸ್ಥರ ಕಬಡ್ಡಿ ಪಂದ್ಯಾಟ ನಡೆಯಿತು. ಇದರ ಜೊತೆಗೆ ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟ ನಡೆಯಿತು.
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಾಂತ್ ಕೆ.ಎಂ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರಾಜೆ ಗ್ರಾ. ಪಂ. ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಗ್ರಾ.ಪಂ. ಸದಸ್ಯ ಸುರೇಶ್ ಪೆರುಮುಂಡ, ಸುಳ್ಯ ವಿನಯ್ ಐಸ್ ಕ್ರೀಮ್ ನ ರಾಜೇಶ್ ಕೆದಿಲಾಯ, ನವೀನ್ ಕುಮಾರ್ ಕುಂಬಳಚೇರಿ, ಸತೀಶ್ ಬಾಳಕಜೆ, ಮಿಥುನ್ ಬಾಳಕಜೆ, ಬಿನು ಮೇಸ್ತ್ರಿ ಪೆರಾಜೆ ಉಪಸ್ಥಿತರಿದ್ದರು.









ಈ ಸಂದರ್ಭದಲ್ಲಿ ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಕ್ರೀಡಾಭಿಮಾನಿಗಳು, ಊರವರು ಉಪಸ್ಥಿತರಿದ್ದರು.
ಫಲಿತಾಂಶ:
650 ವಿಭಾಗದ ಸಾರ್ವಜನಿಕ ಮುಕ್ತ ಪುರುಷರ ಹಗ್ಗಜಗ್ಗಾಟ
ಪ್ರಥಮ:ಶಿವಾಜಿ ವಾರಿಯರ್ಸ್ ಪೂಮಲೆ
ದ್ವಿತೀಯ: ನ್ಯೂ ಫ್ರೆಂಡ್ಸ್ ಬೊಮ್ಮಾರು
ಸಾರ್ವಜನಿಕ ಮುಕ್ತ ಮಹಿಳೆಯರ ತ್ರೋಬಾಲ್ ಪಂದ್ಯಾಟ
ಪ್ರಥಮ:ಸ್ಪಿನ್ನರ್ಸ್ ಮಂಗಳೂರು
ದ್ವಿತೀಯ: ಶ್ರೀ ದುರ್ಗಾ ಫ್ರೆಂಡ್ಸ್ ಪಟ್ರಮೆ
ಪೆರಾಜೆ ಉಪಗ್ರಾಮವರು ಕಬಡ್ಡಿ ಪಂದ್ಯಾಟ
ಪ್ರಥಮ:ಚಿಗುರು ಯುವಕ ಮಂಡಲ ಕುಂಬಳಚೇರಿ
ದ್ವಿತೀಯ: ಶ್ರೀ ವಿಷ್ಣು ಪೀಚೆ











