
ಕುಮಾರಸ್ವಾಮಿ ಪಿಯು ಕಾಲೇಜಿನಲ್ಲಿ ಅ. ೨೪ ರಂದು ನಡೆದ ಅಂತರ್ ಶಾಲಾ ಮಟ್ಟದ “ಇಗ್ನಿಷಿಯಾ ಫೆಸ್ಟ್ ” ಬಹಳ ಸಂಭ್ರಮದಿಂದ ನೆರೆವೇರಿತು. ಸುಮಾರು ೧೨ ಶಾಲೆಯ ೧೭೪ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿ ಹಲವಾರು ವೈಯಕ್ತಿಕ ಹಾಗೂ ಗುಂಪು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.
ಕಾರ್ಯಕ್ರಮವನ್ನು ಶ್ರೀ ಶಿವಪ್ರಕಾಶ್ ಮಾಜಿ ಗುಂಪು ನಿರ್ದೇಶಕರು, ಇಸ್ರೋ ಬೆಂಗಳೂರು ಇವರು ನೆರೆವೇರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಣೇಶ್ ಪ್ರಸಾದ್ ನಾಯರ್, ಉಪಾಧ್ಯಕ್ಷರಾದ ಶಿವರಾಮ್ ಏನೇಕಲ್ಲು, ಸಂಚಾಲಕರಾದ ಚಂದ್ರಶೇಖರ್ ನಾಯರ್, ಕಾಲೇಜಿನ ಪ್ರಾಂಶುಪಾಲಾರದ ಡಾ. ಸಂಕೀರ್ತ್ ಹೆಬ್ಬಾರ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ವಿದ್ಯಾರತ್ನ ಮತ್ತು ಕಾಲೇಜಿನ ನಾಯಕ ವಾಗೀಶರವರು ಉಪಸ್ಥಿತರಿದ್ದರು.









ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಸುದರ್ಶನ ಜೋಯಿಸ್, ಆಡಳಿತಧಿಕಾರಿ, ಸುಬ್ರಹ್ಮಣ್ಯ ಮಠ ಮತ್ತು ಅಶೋಕ್ ನೆಕ್ರಾಜೆ, ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಇವರು ಉಪಸ್ಥಿತರಿದ್ದು ಬಹುಮಾನ ವಿತರಣೆಯನ್ನು ನೆರವೇರಿಸಿಕೊಟ್ಟರು.
ಸೈಂಟ್ ಅನ್ಸ್ ಶಾಲಾ ಮಕ್ಕಳು ರನ್ನರ್ ಅಪ್ ಆಗಿ, ಎಸ್ ಎಸ್ ಪಿ ಯು ಸುಬ್ರಹ್ಮಣ್ಯ ಮೊದಲನೆ ಸ್ಥಾನ ಪಡೆದು ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.










